LATEST NEWS
ಮಲ್ಪೆ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ -ಮೀನುಗಾರರು ಪಾರು

ಉಡುಪಿ ಸೆಪ್ಟೆಂಬರ್ 16: ಕರೊನಾ ಹೊಡೆತದ ನಡುವೆ ಈ ಬಾರಿ ಕರಾವಳಿಯ ಮೀನುಗಾರರಿಗೆ ಸಮುದ್ರವೂ ಕೂಡ ಮುನಿಸಿಕೊಂಡಂತಿದೆ. ಕಳೆದ ಒಂದು ತಿಂಗಳಿಂದ ಸರಣಿ ಮೀನುಗಾರಿಕಾ ಬೋಟುಗಳ ಅಪಘಾತ ನಡೆಯುತ್ತಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.
ಈ ನಡುವೆ ಮತ್ತೊಂದು ಮೀನುಗಾರಿ ಬೋಟ್ ಆಳ ಸಮುದ್ರದಲ್ಲಿ ಅಪಘಾತಕ್ಕೆ ಇಡಾಗಿದೆ. ಉಡುಪಿಯ ಮಲ್ಪೆ ಬಂದರಿನಿಂದ ಒಂದು ದಿನದ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಗೀಡಾಗಿದೆ.

ಶ್ರೀಕಾಂತ ಪುತ್ರನ್ ಎಂಬುವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್ ಇದಾಗಿದ್ದು, ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ವಾಪಸಾಗುವಾಗ ಸೈಂಟ್ ಮೇರಿಸ್ ದ್ವೀಪ ದ ಬಳಿ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿದ್ದು. ಇತರೆ ಬೋಟ್ ಗಳು ತೆರಳಿ ಅವಘಡಕ್ಕೀಡಾದ ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಮೀನುಗಾರಿಕಾ ಬೋಟ್ ಮುಳುಗಡೆಯ ಹಂತದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.