Connect with us

    KARNATAKA

    ಕುತೂಹಲ ಕೆರಳಿಸಿದ್ದ ವಂದೇ ಭಾರತ್ ಸ್ಲೀಪರ್ ಕೋಚ್‌ನ ಫಸ್ಟ್ ಲುಕ್‌ ಫೋಟೊ ವೈರಲ್‌..!

    ಭಾರತ ರೈಲ್ವೇ ಇಲಾಖೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ವಂದೇ ಭಾರತ್ ಎಕ್ಸ್‌ ಪ್ರೆಸ್‌ ನ ಬಹುನಿರೀಕ್ಷಿತ ಸ್ಲೀಪರ್ ಕೋಚ್‌ ಗಳು ಮುಂಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಇದರ ಒಳಾಂಗಣದ ಫಸ್ಟ್ ಲುಕ್ ಪೋಟೋ ವೈರಲ್ ಆಗಿದೆ.

    ಹೊಸದಿಲ್ಲಿ : ಭಾರತ ರೈಲ್ವೇ ಇಲಾಖೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ವಂದೇ ಭಾರತ್ ಎಕ್ಸ್‌ ಪ್ರೆಸ್‌ ನ ಬಹುನಿರೀಕ್ಷಿತ ಸ್ಲೀಪರ್ ಕೋಚ್‌ ಗಳು ಮುಂಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಇದರ ಒಳಾಂಗಣದ ಫಸ್ಟ್ ಲುಕ್ ಪೋಟೋ ವೈರಲ್ ಆಗಿದೆ.

    ಹೊಸ ವಿನ್ಯಾಸದ ವಂದೇ ಭಾರತ್ ಸ್ಲೀಪರ್ ರೈಲನ್ನು ಭಾರತೀಯ ರೈಲ್ವೆ ತಯಾರಿಸುತ್ತಿದ್ದು, ಇದರ ಚಿತ್ರಗಳು ಲೀಕ್ ಆಗಿದ್ದು ಸಾಮಾಜಿಕ ತಾಣಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದಾರೆ.

    “ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ರೈಲು 857 ಬರ್ತ್‌ಗಳನ್ನು ಹೊಂದಿರುತ್ತದೆ. ಈ ಪೈಕಿ ಪ್ರಯಾಣಿಕರಿಗೆ 823 ಮತ್ತು ಸಿಬ್ಬಂದಿಗೆ 34. ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ಇರುತ್ತದೆ” ಎನ್ನಲಾಗಿದೆ.

    ಈ ಸ್ಲೀಪರ್ ರೈಲುಗಳನ್ನು ಭಾರತದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಮತ್ತು ರಷ್ಯಾದ ಟಿಎಂಎಚ್‌ ಗ್ರೂಪ್‌ ಒಕ್ಕೂಟ ಜಂಟಿಯಾಗಿ ತಯಾರಿಸುತ್ತಿದೆ.

    ಪ್ರಯಾಣಿಕರು ರಾತ್ರಿ ಇಡೀ ಆರಾಮದಾಯಕವಾಗಿ ಈ ಹೈಸ್ಪೀಡ್ ರೈಲುಗಳಲ್ಲಿ ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳು ಭಾರತೀಯ ರೈಲ್ವೇ ಫ್ಲೀಟ್‌ಗೆ ಗಮನಾರ್ಹ ಸೇರ್ಪಡೆಯಾದಂತಾಗಲಿವೆ.

    ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಗತಿಶೀಲ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣಲಾಗುತ್ತದೆ.

    ಸ್ಥಳೀಯ ಸೆಮಿ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಫೀಚರ್‌ಗಳಾಗಿವೆ ಎಂದು ನಂಬಲಾಗಿದೆ.

    ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡುತ್ತದೆ.

    ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15 ರಂದು ಚಾಲನೆ ನೀಡಿದ್ದರು.

    ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾದ ಈ ರೈಲು ಸೆಟ್ ‘ಮೇಕ್-ಇನ್-ಇಂಡಿಯಾ’ ಉಪಕ್ರಮದ ಸಂಕೇತವಾಗಿದೆ ಮತ್ತು ಭಾರತದ ಎಂಜಿನಿಯರಿಂಗ್ ಪರಾಕ್ರಮದ ಪ್ರತೀಕವಾಗಿದೆ.

    ಸ್ಥಳೀಯ ಸೆಮಿ ಹೈ ಸ್ಪೀಡ್‌ ರೈಲು ಸೆಟ್‌ಗಳನ್ನು ತಯಾರಿಸುವ ಯೋಜನೆಯು 2017ರ ಮಧ್ಯದಲ್ಲಿ ಪ್ರಾರಂಭವಾಯಿತು ಮತ್ತು 18 ತಿಂಗಳೊಳಗೆ, ಚೆನ್ನೈನ ಐಸಿಎಫ್‌ ರೈಲು-18 ಅನ್ನು ಪೂರ್ಣಗೊಳಿಸಿ ಹೊಸ ದಾಖಲೆ ಬರೆದಿತ್ತು.

    ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲಿಗೆ 2019 ರ ಜನವರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಯಿತು. ಆ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಶ್ವ ದರ್ಜೆಯ ರೈಲುಗಳ ಸಾಲಿಗೆ ಸೇರ್ಪಡೆಯಾಯಿತು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *