LATEST NEWS
ರಾಜ್ಯದ ಪ್ರಥಮ ಹೋಬಳಿ ಮಟ್ಟದ ಇಂದಿರಾ ಕ್ಯಾಂಟಿನ್ ನಾಳೆ ಉದ್ಘಾಟನೆ
ರಾಜ್ಯದ ಪ್ರಥಮ ಹೋಬಳಿ ಮಟ್ಟದ ಇಂದಿರಾ ಕ್ಯಾಂಟಿನ್ ನಾಳೆ ಉದ್ಘಾಟನೆ
ಮಂಗಳೂರು ಮಾರ್ಚ್ 21: ರಾಜ್ಯದಲ್ಲೆ ಮೊದಲಬಾರಿಗೆ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟಿನ್ ನ್ನು ತೊಕ್ಕೊಟ್ಟುವಿನಲ್ಲಿ ನಾಳೆ ಕಾರ್ಯಾರಂಭ ಮಾಡಲಿದೆ ಎಂದು ಆಹಾರ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಥಮ ಹೋಬಳಿ ಮಟ್ಟದ ಇಂದಿರಾ ಕ್ಯಾಂಟಿನ್ ಇದಾಗಿದ್ದು, ತೊಕ್ಕೊಟ್ಟುವಿನಲ್ಲಿ ನಿರ್ಮಿಸಲಾಗಿದ್ದು ನಾಳೆ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಮಂಗಳೂರು ಕ್ಯಾಂಟೀನ್ ನಲ್ಲಿ ಸ್ಥಳೀಯ ಆಹಾರ ನೀಡಲು ಚಿಂತನೆ ನಡೆಸಲಾಗಿದ್ದು, ಮಧ್ಯಾಹ್ನ ಕುಚ್ಚಲಕ್ಕಿಅನ್ನ ಹಾಗೂ ಬೆಳಿಗ್ಗೆ ಇಡ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯ ಇಂದಿರಾ ಕ್ಯಾಂಟಿನ್ ನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆ 7 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಕ್ಯಾಂಟಿನ್ ಕಾರ್ಯಾಚರಿಸಲಿದೆ ಎಂದು ಹೇಳಿದರು.