LATEST NEWS
ಚಲಿಸುತ್ತಿದ್ದ ರೈಲಿನ ಇಂಜಿನ್ನಲ್ಲಿ ಬೆಂಕಿ: ಪ್ರಯಾಣಿಕರು ಸೇಫ್
ಬಿಹಾರ, ಜುಲೈ 03: ಇಂದು ಮುಂಜಾನೆ ಬಿಹಾರದ ಭೆಲ್ವಾ ರೈಲು ನಿಲ್ದಾಣದ ಬಳಿ ಡಿಎಂಯು ರೈಲಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ರೈಲು ರಕ್ಸಾಲ್ನಿಂದ ನರ್ಕಟಿಯಾಗಂಜ್ಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಚಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.ಇಂದು ಬೆಳಿಗ್ಗೆ 5.25 ಕ್ಕೆ ಈ ಅನಾಹುತ ಸಂಭವಿಸಿದೆ ಎಂದು ಎಸ್ಎಂ ಭೆಲ್ವಾ ಬೆಂಕಿಯನ್ನು ವರದಿ ಮಾಡಿದ್ದಾರೆ.
Bihar | Fire broke out in engine of a DMU train near Bhelwa railway station earlier this morning. The train was going from Raxaul to Narkatiaganj. Cause of the fire yet to be ascertained. All passengers are safe, fire from the engine did not spread. Fire fighting ops are underway
— ANI (@ANI) July 3, 2022
ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಎಲ್ಲಾ ಪ್ರಯಾಣಿಕರು ರೈಲಿನಿಂದ ಸುರಕ್ಷಿತವಾಗಿ ಕೆಳಗಿಳಿದ್ದಾರೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.