LATEST NEWS
ಇಸ್ತ್ರೀ ಪೆಟ್ಟಿಗೆ ತಂದ ಆಪತ್ತು – ಪ್ಲಾಟ್ ನಲ್ಲಿ ಬೆಂಕಿ ಅನಾಹುತ

ಮಂಗಳೂರು ಜನವರಿ 11: ಇಸ್ತ್ರೀ ಪೆಟ್ಟಿಗೆ ಆನ್ ಮಾಡಿಟ್ಟ ಕಾರಣ ಪ್ಲಾಟ್ ಒಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ನಗರದ ಕದ್ರಿ ಕಂಬಳ ರಸ್ತೆಯ ಸಾಯಿ ಜಗನ್ನಾಥ್ ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮಂಗಳೂರಿನ ಜೈಲು ರಸ್ತೆ ಕದ್ರಿ ಕಂಬಳ ಮಾರ್ಗದ 5 ಮಹಡಿಯ ಕಟ್ಟಡವೊಂದರ 2ನೇ ಮಹಡಿಯ ಫ್ಲ್ಯಾಟ್‌ನಲ್ಲಿರುವ ಬೆಡ್‌ರೂಂನಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹಾಸಿಗೆ ಮತ್ತಿತರ ಪರಿಕರಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಕದ್ರಿ ಕಂಬಳ ಫ್ಲಾಟ್ ನಗರದ ವೈದ್ಯರೊಬ್ಬರಿಗೆ ಸೇರಿದ್ದೆನ್ನಲಾಗಿದ್ದು, ಅವರು ಆಸ್ಪತ್ರೆಗೆ ಹೋಗುವ ಮುನ್ನ ಬಟ್ಟೆಗೆ ಇಸ್ತ್ರಿ ಹಾಕಿ ಸ್ವಿಚ್ ಆಫ್ ಮಾಡದ ಕಾರಣ ಬೆಂಕಿ ಹಿಡಿಯಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.