Connect with us

    LATEST NEWS

    ಮುಂಬೈ ಕೈಗವಸು ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ದುರಂತ, 6 ಬಲಿ..!

    ಮುಂಬೈ:  ಕೈಗವಸು( gloves)  ಉತ್ಪಾದನಾ ಕಂಪನಿಯಲ್ಲಿ ನಡೆದ ಭೀಕರ ಬೆಂಕಿ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದದಲ್ಲಿ ಸಂಭವಿಸಿದೆ.

     

    ಛತ್ರಪತಿ ಸಂಭಾಜಿನಗರದಲ್ಲಿ ಭಾನುವಾರ ತಡರಾತ್ರಿ 2.15ರ ಸುಮಾರಿಗೆ ಈ ದುರ್ಘಟನೆ  ನಡೆದಿದೆ. ವಲೂಜ್ ಎಂಐಡಿಸಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫ್ಯಾಕ್ಟರಿಯಾದ್ಯಂತ ಬೆಂಕಿ ವ್ಯಾಪಿಸಿತ್ತು. ಆರು ಮಂದಿ ಫ್ಯಾಕ್ಟರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ನಮ್ಮ ಅಧಿಕಾರಿಗಳು ಕಟ್ಟಡವನ್ನು ಪ್ರವೇಶಿಸಿ ಶೋಧ ಕಾರ್ಯ ನಡೆಸಿದಾಗ ಆರು ಮೃತದೇಹಗಳು ಪತ್ತೆಯಾಗಿವೆ” ಎಂದು ಅಗ್ನಿಶಾಮಕ ದಳದ ಅಧಿಕಾರಿ ಮೋಹನ್ ಮುಂಗ್ಸೆ ಹೇಳಿದ್ದಾರೆ. “ಕಟ್ಟಡದಲ್ಲಿ 10-15 ಮಂದಿ ಕಾರ್ಮಿಕರು ನಿದ್ರಿಸುತ್ತಿದ್ದರು. ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು” ಎಂದು ಕಾರ್ಮಿಕರೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply