Connect with us

    KARNATAKA

    ಕಾಡಾನೆ ಜೊತೆ ಕಾದಾಟ – ದಸರಾ ಆನೆ ಗೋಪಾಲಸ್ವಾಮಿ ಸಾವು

    ಮೈಸೂರು, ನವೆಂಬರ್ 24: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ (39) ಕಾಡಾನೆ ದಾಳಿಯಿಂದ ಸಾವನ್ನಪ್ಪಿದೆ.

    ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ  ಆನೆಯನ್ನು ಕಾಡಿಗೆ ಬಿಡಲಾಗಿತ್ತು. ಹನಗೋಡು ಸಮೀಪದಲ್ಲಿ ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆ ಜೊತೆ ಕಾದಾಟ ನಡೆಸಿ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ.

    ಇತ್ತಿಚೆಗಷ್ಟೇ ನಡೆದ ಮೈಸೂರು ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಆನೆ ಪಾಲ್ಗೊಂಡಿತ್ತು. ತನ್ನ ಶಾಂತ ಸ್ವಭಾವಕ್ಕೆ ಈ ಆನೆ ಜನರ ಪ್ರೀತಿ ಗಳಿಸಿತ್ತು. ಈ ಬಾರಿ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಒಮ್ಮೆ ಜನದಟ್ಟಣೆ ಹಾಗೂ ಪಟಾಕಿ ಶಬ್ದದಿಂದ ಗೋಪಾಲಸ್ವಾಮಿ ವಿಚಲಿತ ಆಗಿತ್ತು. 14 ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಆನೆ ಪಾಲ್ಗೊಂಡಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply