Connect with us

    FILM

    ನನಗೂ ನನ್ನ ಪತಿಗೆ ಕೇವಲ 9 ವರ್ಷ ವಯಸ್ಸಿನ ಅಂತರ ಅಷ್ಟೇ ಎಂದ ಕಿರುತೆರೆ ನಟಿ

    ಕೇರಳ ನವೆಂಬರ್ 03: ಇತ್ತಿಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟರಾದ ದಿವ್ಯಾ ಶ್ರೀಧರ್ ಮತ್ತು ಕ್ರಿಸ್ ವೇಣುಗೋಪಾಲ್ ಅವರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಸ್ ವೇಣುಗೋಪಾಲ ಅವರ ಬಿಳಿಗಡ್ಡದ ಲುಕ್ ಗೆ ಟ್ರೋಲ್ ಆಗಿದ್ದಾರೆ. ಇದೀಗ ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಟಿ ಕ್ರಿಸ್ ಮತ್ತು ತನಗೆ ಒಂಬತ್ತು ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ ಎಂದು ದಿವ್ಯಾ ತಿಳಿಸಿದ್ದಾರೆ.


    “ನಮ್ಮ ಮದುವೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕೆಂದು ನಾವು ಬಯಸಿದ್ದೇವೆ. ಆದರೆ, ಜನರ ಪ್ರತಿಕ್ರಿಯೆ ಸಕಾರಾತ್ಮಕವಾಗಿಲ್ಲ. ಮದುವೆಯಾಗುವುದು ಅಪರಾಧವೇ? ನಮ್ಮಲ್ಲಿ ಕೆಲವರು ನಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿಂದಾಗಿ ಎರಡನೇ ಮದುವೆಯನ್ನು ಆರಿಸಿಕೊಳ್ಳುತ್ತಾರೆ. ಇದು ಹೇಗೆ ಭಯಾನಕ ವಿಷಯ? ಅವರ ಜೀವನ ಶ್ರೇಷ್ಠವಲ್ಲ ಎಂಬ ಕಾರಣಕ್ಕೆ ಅವರು ಬಹುಶಃ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದು ದಿವ್ಯಾ ಹೇಳಿದ್ದಾರೆ.


    “ನಾನು ಲೈಂಗಿಕತೆಗಾಗಿ ಮಾತ್ರ ಮದುವೆಯಾಗಿಲ್ಲ. ನನ್ನ ಮಕ್ಕಳು ಸುರಕ್ಷಿತವಾಗಿರಬೇಕೆಂದು ನಾನು ಬಯಸುತ್ತೇನೆ; ಅವರಿಗೆ ತಂದೆ ಬೇಕು. ಜೊತೆಗೆ, ನನಗೆ ಗಂಡ ಮತ್ತು ಗುರುತು ಕೂಡ ಬೇಕಿತ್ತು. ಲೈಂಗಿಕತೆಯು ಕೇವಲ ಜೀವನದ ಒಂದು ಭಾಗವಾಗಿದೆ. 60 ವರ್ಷದ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಸುದ್ದಿ ವರದಿಗಳು ಹೇಳುತ್ತವೆ. ಆದರೆ, ಅವರಿಗೆ 49 ಮತ್ತು ನನಗೆ 40. ನಾನು 1984 ರಲ್ಲಿ ಜನಿಸಿದರೆ, ಅವರು 1975 ರಲ್ಲಿ ಜನಿಸಿದೆ ಎಂದು ದಿವ್ಯಾ ಹೇಳಿದರು. 50 ಅಥವಾ 60 ವರ್ಷದ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದರೂ ಜನರಿಗೆ ಏಕೆ ತೊಂದರೆ ನೀಡಬೇಕು ಎಂದು ದಿವ್ಯಾ ಪ್ರಶ್ನಿಸಿದ್ದಾರೆ.

     

    ಮಲಯಾಳಂ ಮತ್ತು ತಮಿಳು ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ದಿವ್ಯಾ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಕ್ರಿಸ್ ಪ್ರಪೋಸ್ ಮಾಡಿದಾಗ ಮೊದಲಿಗೆ ಸ್ವಲ್ಪ ಹಿಂಜರಿದಿದ್ದರು. ಮೊದಮೊದಲು ಕ್ರಿಸ್ ನನ್ನ ಜೊತೆ ಆಟವಾಡುತ್ತಿದ್ದಾನೆ ಅಂತ ಅಂದುಕೊಂಡಿದ್ದೆ. ನನಗಿಂತ ತುಂಬಾ ಎತ್ತರದಲ್ಲಿ ಇದ್ದಾನೆ ಅಂತ ಅಂದುಕೊಂಡಿದ್ದೆ.ಆದರೆ ನಂತರ ಈ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿದ್ದು, ನನ್ನನ್ನು ಮದುವೆಯಾಗಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *