Connect with us

LATEST NEWS

ಭಾವಿ ಪತಿಯನ್ನೇ ವಂಚನೆ ಪ್ರಕರಣದಲ್ಲಿ ಜೈಲಿಗೆ ಅಟ್ಟಿದ ಮಹಿಳಾ ಸಬ್ ಇನ್ಸ್ ಪೆಕ್ಟರ್

ಅಸ್ಸಾಂ: ನಿಶ್ಚಿತಾರ್ಥ ಮಾಡಿಕೊಂಡು ಇನ್ನು ಕೆಲವೇ ತಿಂಗಳಲ್ಲಿ ಮದುವೆಯಾಗಬೇಕಾಗಿದ್ದ ಹುಡುಗನನ್ನೇ ವಂಚನೆ ಪ್ರಕರಣದಲ್ಲಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಜೈಲಿಗೆ ಕಳುಹಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.


ರಾಣಾ ಪೋಗಾಗ್ ಹಾಗೂ ಸಬ್ ಇನ್ಸ್ ಪೆಕ್ಟರ್ ಜುನ್ಮೋನಿ ರಾಭಾ ಅವರಿಗೆ ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದು,. ನವೆಂಬರ್ ತಿಂಗಳಲ್ಲಿ ಮದುವೆ ದಿನವೂ ನಿಗದಿಯಾಗಿತ್ತು. ಆದರೆ ರಾಣಾ ಪೋಗಾಗ್ ತಾನು ಓಎನ್ ಜಿಸಿ ಅಧಿಕಾರಿ ಎಂದು ಸುಳ್ಳು ಹೇಳಿ ಹಲವರಿಂದ ಹಣ ವಂಚನೆ ಮಾಡಿದ್ದಾನೆ. ಪೋಲೀಸರ ಪ್ರಕಾರ ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋದು ಬಯಲಾಗಿದೆ.


ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರಿಗೆ ತಾನೊಬ್ಬ ಒಎನ್‌ಜಿಸಿ ಅಧಿಕಾರಿ ಎಂದು ಈತ ಪರಿಚಯಿಸಿಕೊಂಡಿದ್ದನಂತೆ. ಆತ ಕಳ್ಳ ಎಂದು ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಿದ್ದೇನೆ. ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ತಿಳಿಸಲು ನನ್ನ ಬಳಿಗೆ ಬಂದ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣು ತೆರೆಸಿದರು ಎಂದು ಜುನ್ಮೋನಿ ರಾಭಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾನು ರಾಣಾ ಪೊಗಾಗ್ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಎನ್ ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ನಂತರ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

Advertisement
Click to comment

You must be logged in to post a comment Login

Leave a Reply