Connect with us

LATEST NEWS

ಗಾಂಜಾ ಪೂರೈಕೆ ಯತ್ನ, ಮಗನೊಂದಿಗೆ ಅಪ್ಪ ಜೈಲುಪಾಲು

Share Information

ಗಾಂಜಾ ಪೂರೈಕೆ ಯತ್ನ, ಮಗನೊಂದಿಗೆ ಅಪ್ಪ ಜೈಲುಪಾಲು

ಮಂಗಳೂರು, ಸೆಪ್ಟೆಂಬರ್ 16 : ಜೈಲಿನಲ್ಲಿರುವ ತನ್ನ ಮಗನಿಗೇ ಮಾದಕ ವಸ್ತುವಾದ ಗಾಂಜಾವನ್ನು ಪೂರೈಸಲು ಯತ್ನಿಸುತ್ತಿದ್ದ ಅಪ್ಪನನ್ನೇ ಮಂಗಳೂರಿನ ಬರ್ಕೆ ಪೋಲಿಸರು ಬಂಧಿಸಿದ್ದಾರೆ. ಈ ಅಪರಾಧ ಎಸಗಿದ ಆರೋಪಿಯೇ ದಿವಾಕರ್. ದಿವಾಕರ್ ಮಗ ರಕ್ಷಿತ್ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿ ಇದೀಗ ಮಂಗಳೂರಿನ ಜೈಲಿನಲ್ಲಿ  ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಮಾದಕ ವ್ಯಸನಿ ಮಗನಿಗೆ ಜೈಲು ಪಕ್ಕದಲ್ಲೇ ಇರುವ ಡಯಾಟ್ ಶಿಕ್ಷಣ ಸಂಸ್ಥೆಯ ಅವರಣದಿಂದ ಗಾಂಜಾವನ್ನು ಪೊಟ್ಟಣದಲ್ಲಿ ಸುತ್ತಿ ಜೈಲು ಆವರದೊಳಗೆ ಎಸೆಯಲು ಅಪ್ಪ ದಿವಾಕರ ಯತ್ನಿಸಿದ್ದಾಗ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ದಿವಾಕರನನ್ನು ತೀವೃ ವಿಚಾರಣೆಗೆ ಒಳಪಡಿಸಿದಾಗ ಆತನ ಬಳಿ 60 ಗ್ರಾಂ ಗಾಂಜಾ, ಪ್ಯಾರಾ ಸಿಟಮಲ್ ಮಾತ್ರೆಗಳು ಹಾಗೂ ಮೊಬೈಲ್ ಪತ್ತೆಯಾಗಿದೆ.

ಬರ್ಕೆ ಪೋಲಿಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದು, ದಿವಾಕರಿಗೂ ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜೈಲಿನಲ್ಲಿರುವ ಮಗನಿಗೆ ಗಾಂಜಾ ಪೂರೈಸಲು ಹೋಗಿ ಪೋಲಿಸರ ಕೈಗೆ ಸಿಕ್ಕಿಬಿದ್ದು ಮಗನೊಂದಿಗೆ ಅಪ್ಪ ಕೂಡ ಇದೀಗ ಜೈಲು ಕಂಬಿ ಎಣಿಸಬೇಕಾಗಿದೆ.


Share Information
Advertisement
Click to comment

You must be logged in to post a comment Login

Leave a Reply