FILM
ಅಂಡಾಶಯದ ಕ್ಯಾನ್ಸರ್ ಗೆ ಬಲಿಯಾದ 30 ವರ್ಷದ ಫ್ಯಾಶನ್ ಇನ್ ಫ್ಲುಯೆನ್ಸರ್ ಸುರಭಿ ಜೈನ್
ನವದೆಹಲಿ ಎಪ್ರಿಲ್ 20: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಫ್ಯಾಶನ್ ಇನ್ ಫ್ಲುಯೆನ್ಸರ್ ಸುರಭಿ ಜೈನ್ ಅಂಡಾಶಯ ಕ್ಯಾನ್ಸರ್ ನಿಂದಾಗಿ ತನ್ನ 30ನೇ ವರ್ಷಕ್ಕೆ ಸಾವನಪ್ಪಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶ್ರೀಮತಿ ಜೈನ್ ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋವನ್ನು ಹಂಚಿಕೊಂಡು ಆರೋಗ್ಯದ ಬಗ್ಗೆ ಇತ್ತೀಚೆಗೆ ಅಪ್ಡೇಟ್ ನ್ನು ಹಂಚಿಕೊಂಡಿದ್ದರು. ಸುರಭಿ ಜೈನ್ ಎಂಟು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಳು.
ಗುರುವಾರ ಅವರು ನಿಧನರಾಗಿದ್ದು ಶುಕ್ರವಾರ(ಏ.19 ರಂದು) ಗಾಜಿಯಾಬಾದ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. “ನನ್ನ ಆರೋಗ್ಯದ ಬಗ್ಗೆ ನಾನು ನಿಮಗೆ ಎಲ್ಲವನ್ನೂ ಅಪ್‌ಡೇಟ್ ಮಾಡಿಲ್ಲ ಎಂದು ನನಗೆ ತಿಳಿದಿದೆ, ಅದು ನನಗೆ ಪ್ರತಿದಿನ ಬರುತ್ತಿರುವ ಸಂದೇಶಗಳ ಸಂಖ್ಯೆಯನ್ನು ತಪ್ಪಾಗಿ ಭಾವಿಸುತ್ತದೆ. ಆದರೆ ವಿಷಯಗಳು ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಹಂಚಿಕೊಳ್ಳಲು ಹೆಚ್ಚು ಇಲ್ಲ. ಕಳೆದ 2 ತಿಂಗಳುಗಳು ನಾನು ಹೆಚ್ಚಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಇದು ಕಷ್ಟಕರವಾಗಿದೆ ಮತ್ತು ಇದೆಲ್ಲವೂ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ, ”ಎಂದು ಅವರು ಬರೆದಿದ್ದಾರೆ.
2022ರಲ್ಲಿ ಅವರಿಗೆ ಕ್ಯಾನ್ಸರ್ ಪತ್ತೆಯಾಗಿತ್ತು, ಬಳಿಕ ಚಿಕಿತ್ಸೆ ತೆಗೆದುಕೊಂಡ ಅವರು ನಂತರ ಸೋಶಿಯಲ್ ಮಿಡಿಯಾದಲ್ಲಿ ಫ್ಯಾಶನ್ ಇನ್ ಫ್ಲುಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಈ ನಡುವೆ ಮತ್ತೆ ಕ್ಯಾನ್ಸರ್ ಉಲ್ಬಣಿಸಿ ಅವರ ಜೀವನವನ್ನೇ ಬಲಿ ತೆಗೆದುಕೊಂಡಿದೆ.