ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಧ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಕುರಿತು – ಉಡುಪಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.

ಉಡುಪಿ ಜುಲೈ 30 : ಉಡುಪಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಧ್ಯಮಗೋಷ್ಟಿಯಲ್ಲಿ ಕಾವ್ಯ ಸಾವಿನ ವಿಚಾರ ಮತ್ತು ಆ ನಂತರದ ಬೆಳವಣಿಗೆಗಳ ವಿಚಾರವಾಗಿ ಮಾತನಾಡಿದರು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಧ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಕುರಿತು ಉಡುಪಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಆಳ್ವಾಸ್ ಕಾಲೇಜು ಮೂರು ಲಕ್ಷ ಕುಟುಂಬಕ್ಕೆ ನೆರವಾಗಿದೆ.
ಸಾವಿರಾರು ವಿದ್ಯಾರ್ಥಿಗಳಿಗೆ ಆಳ್ವಾಸಲ್ಲಿ ಶಿಕ್ಷಣ ಸಿಗುತ್ತಿದೆ. ವಿಧ್ಯಾರ್ಥಿನಿ ಕಾವ್ಯಾ ಸಾವಿನ ಪ್ರಕರಣದ ಬಗ್ಗೆ ಸಮಾಜದಲ್ಲಿ ಚರ್ಚೆ ಆರಂಭವಾಗಿದೆ.ರಾಜ್ಯ ಸರ್ಕಾರ ಪ್ರಕರಣ ಸತ್ಯಾಸತ್ಯತೆ ಅರಿಯಬೇಕು. ಸರಿಯಾದ ಪಾರದರ್ಶಕ ತನಿಖೆಯಾಗಬೇಕು ಎಂದು ಹೇಳಿದರು. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಮೂಲಕ ಜಡ್ಜ್ ಮೆಂಟ್ ಯಾಕೆ ಮಾಡಬೇಕೆಂದು ಅವರು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಮೋಹನ ಆಳ್ವ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಟಿವಿಯಲ್ಲಿ ನಾನು ಅವರನ್ನು ನೋಡಿದೆ. ಅವರು ಸಂಪೂರ್ಣ ಕುಗ್ಗಿದಂತಿದೆ. ಆಳ್ವಾಸ್ ಕಾಲೇಜಿನ 26 ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿದ್ದಾರೆ ಅಲ್ಲದೇ 4 ಸಾವಿರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಇಲ್ಲಸಲ್ಲದವರು ಈ ಆತ್ಮಹತ್ಯೆ ಪ್ರಕರಣಕ್ಕೆ ರೆಕ್ಕೆ ಪುಕ್ಕ ಕಟ್ಟಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಿ.ಎಂ ಕುಮಾರಸ್ವಾಮಿ ಒಳ್ಳೆಯ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ ಎಂದು ನಾನು ಜನರಲ್ಲಿ ನಾನು ವಿನಂತಿ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಎಲ್ಲಾ ಸಂಘಟನೆಗಳು ತಮ್ಮ ಕೆಟ್ಟ ರಾಜಕೀಯ ನಿಲ್ಲಿಸಬೇಕು. ಸತ್ಯಾಸತ್ಯತೆ ಅರಿತು ಮಾತುಗಳನ್ನು ಆಡಬೇಕು. ವಯಸ್ಸಾದವರು ಯಾರೋ ಹೋರಾಟಗಾರರಂತೆ ಮಾಧ್ಯಮಗಳಲ್ಲಿ ತರ್ಕ ಮಾಡುತ್ತಿದ್ದಾರೆ. ಅವರು ಯಾವ ಹೋರಾಟಗಾರರೋ ನನಗೆ ಗೊತಾಗುತ್ತಿಲ್ಲ ಎಂದು ಹೇಳಿದರು.