Connect with us

  FILM

  ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ

  ಕೊಚ್ಚಿ, ಮಾರ್ಚ್ 27: ಮಲಯಾಳಂ ಖ್ಯಾತ ನಟ ಇನೋಸೆಂಟ್ (75) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ.

  ಕಳೆದ ಸಮಯದ ಹಿಂದೆ ಕ್ಯಾನ್ಸರ್ ನಿಂದ ಗುಣಮುಖರಾದ ಇನೋಸೆಂಟ್ ಆ ಬಳಿಕ ಗಂಟಲು ಸೋಂಕಿಗೆ ಒಳಗಾಗಿದ್ದರು. ಮಾರ್ಚ್ ಮೊದಲ ವಾರದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್ ನಲ್ಲಿ ‌ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ‌.

  1972 ರಲ್ಲಿ ʼನೃತ್ಯಶಾಲಾʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು 4 ದಶಕಗಳ ಕಾಲ ನೂರಾರು ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಮಿಂಚಿದ್ದಾರೆ. ಇತ್ತೀಚೆಗೆ ಪೃಥ್ವಿರಾಜ್‌ ಸುಕುಮಾರನ್‌ ಅವರ ʼಕಡುವʼ, ಇನ್ನು ರಿಲೀಸ್‌ ಆಗಲಿರುವ ಫಾಹದ್‌ ಫಾಸಿಲ್‌ ಅವರ ʼಪಾಚುವುಂ ಅದ್ಭುತವಿಳಕ್ಕುಂʼ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

  ನಟರಲ್ಲದೆ, ಇನೋಸೆಂಟ್ ಚಾಲಕುಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿದ್ದರು. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಶಶಿ ತರೂರ್, ಖುಷ್ಬು ಸುಂದರ್ ಸೇರಿದಂತೆ ಅನೇಕ ಕಲಾವಿದರು ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply