Connect with us

    FILM

    ಸಹೋದರಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಖ್ಯಾತ ನಟಿ ಡಾಲಿ ಸೋಹಿ ವಿಧಿವಶ..!

    ಮುಂಬಯಿ: ಜನಪ್ರಿಯ ಟಿವಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದ ನಟ ಡಾಲಿ ಸೋಹಿ (47) ಅವರು ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನವಿ ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

    ಡಾಲಿ ಸೋಹಿ ಮೃತಪಟ್ಟ ಕೆಲವೇ ಗಂಟೆಗಳ ಮೊದಲು ಡಾಲಿ ಸೋಹಿಯಾ ಸಹೋದರಿ ಅಮನ್‌ದೀಪ್ ಸೋಹಿ ಜಾಂಡೀಸ್ ಕಾಯಿಲೆಯಿಂದ ನಿಧನರಾಗಿದ್ದರು. ನಟಿ ಡಾಲಿ ಸೋಹಿ ಅವರು ಕಳೆದ ಆರು ತಿಂಗಳಿನಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಡಾಲಿ ಸೋಹಿ ಮೃತಪಟ್ಟ ಕೆಲವೇ ಗಂಟೆಗಳ ಮೊದಲು ಅಂದರೆ ಮಾರ್ಚ್ ೭ ರಂದು ಡಾಲಿ ಸೋಹಿಯಾ ಸಹೋದರಿ ಅಮನ್‌ದೀಪ್ ಸೋಹಿ ಜಾಂಡೀಸ್ ಕಾಯಿಲೆಯಿಂದ ನಿಧನರಾಗಿದ್ದರು.ಈ ಕುರಿತು ಹೇಳಿಕೆ ನೀಡಿದ ಸಹೋದರ ನನ್ನ ಸಹೋದರಿ ಡಾಲಿ ಸೋಹಿ ಅಪೋಲೋ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ 4.00 ರ ಸುಮಾರಿಗೆ ನಿಧನರಾದರು. ಆಕೆಗೆ ಗರ್ಭಕಂಠದ ಕ್ಯಾನ್ಸರ್ ಇತ್ತು, ಅದು ಅವಳ ಶ್ವಾಸಕೋಶಕ್ಕೆ ಹರಡಿತ್ತು, ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ ನಾವು ನಿನ್ನೆ ರಾತ್ರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೆವು ಆದರೆ ಆಕೆ ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ.ಡಾಲಿ ಕಿರುತೆರೆಯಲ್ಲಿ ಕುಸುಮ್, ಮೇರಿ ಆಶಿಕಿ ತುಮ್ ಸೆ ಹೈ, ಕುಂಕುಮ್ ಭಾಗ್ಯ, ಮತ್ತು ಪರಿಣೀತಿಯಂತಹ ಟಿವಿ ಶೋಗಳು ಸೇರಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply