KARNATAKA
ಕೌಟುಂಬಿಕ ಕಲಹ, ಮೂರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ..!!
ಗದಗ ದ ಕೊರ್ಲಹಳ್ಳಿ ಬಳಿ ಕೌಟುಂಬಿಕ ಕಲಹ ಮೂರು ಮಕ್ಕಳನ್ನು ಬಲಿ ಪಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ವ್ಯಕ್ತಿಯೊಬ್ಬ ತಾನೂ ನದಿಗೆ ಹಾರಿದ್ದಾನೆ.
ಗದಗ : ಗದಗ ದ ಕೊರ್ಲಹಳ್ಳಿ ಬಳಿ ಕೌಟುಂಬಿಕ ಕಲಹ ಮೂರು ಮಕ್ಕಳನ್ನು ಬಲಿ ಪಡೆದಿದೆ. ಕೌಟುಂಬಿಕ ಕಲಹ ಕ್ಕೆ ಬೇಸತ್ತು ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ವ್ಯಕ್ತಿಯೊಬ್ಬ ತಾನೂ ನದಿಗೆ ಹಾರಿದ್ದಾನೆ.
ಮುಂಡರಗಿ ತಾಲೂಕಿನ ಮಕ್ತುಂಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ (38), ವೇದಾಂತ (3), ಪವನ (4), ಧನ್ಯಾ (6) ಎಂಬ ಮಕ್ಕಳನ್ನು ನದಿಗೆ ಎಸೆದು ತಾನೂ ನದಿಗೆ ಹಾರಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳು ಹಾಗೂ ಅಳಿಯನ ಮಗ ಸೇರಿ ಮೂವರು ಮಕ್ಕಳನ್ನು ಮಕ್ತುಂಪೂರ ಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಗೆ ಆಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿನಿಂದ ಮಕ್ಕಳನ್ನು ಎಸೆದು ತಾನೂ ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಧಾವಿಸಿ, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರೊಂದಿಗೆ ಹುಟುಕಾಟ
ನಡೆಸುತ್ತಿದ್ದಾರೆ.