LATEST NEWS
ಚಿನ್ನದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ
ಹೊಸದಿಲ್ಲಿ ಅಗಸ್ಟ್ 2: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇದೀಗ ಬಂಗಾರ ಕೊಳ್ಳುವವರಿಗೆ ಲಾಭವಾಗಲಿದ್ದು, ಭಾರೀ ಪ್ರಮಾಣದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 365 ರೂಪಾಯಿಗೆ ಇಳಿಕೆಯಾಗಿದ್ದು 30,435 ರೂ.ಗಳಷ್ಟು ದಾಖಲಾಗಿದೆ. ಸ್ಥಳೀಯ ಚಿನ್ನದ ಆಭರಣ ತಯಾರಕರಿಂದ ಬೇಡಿಕೆ ಕುಸಿದಿರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಈ ಚಿನ್ನಕ್ಕೆ ಬೇಡಿಕೆ ತುಸು ಕಡಿಮೆಯಾಗಿರುವುದೇ ಬೆಲೆ ಇಳಿಕೆಗೆ ಕಾರಣವಾಗಿದೆ.

ಚಿನ್ನದ ದರದ ಜತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಕೆ.ಜಿ ಬೆಳ್ಳಿ ಬೆಲೆ 50 ರೂ.ಗಳಷ್ಟು ಇಳಿಕೆಯಾಗಿದ್ದು 40,000 ರೂ.ಗಳ ಒಳಗೆ 39,000 ರೂ.ಗಳಲ್ಲಿ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನ (22 ಕ್ಯಾರೆಟ್) ಗ್ರಾಂಗೆ 2,790ರಷ್ಟಿದ್ದು, ಶುದ್ಧ ಚಿನ್ನ (24 ಕ್ಯಾರೆಟ್) ಗ್ರಾಂಗೆ 2,930ರಷ್ಟಿದೆ. ಅದೇ ರೀತಿ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಂಗೆ 41.1 ರೂ.ಗಳಷ್ಟಿದೆ.
ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂ ಗೆ 2,775 ರೂಪಾಯಿ ಇದ್ದು, ಶುದ್ದ ಚಿನ್ನ 24 ಕ್ಯಾರೆಟ್ ಗೆ 3,048 ರೂಪಾಯಿ ಇದೆ.