LATEST NEWS
ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ನಕಲಿ ನೋಟ್ ಚಲಾವಣೆ
ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ನಕಲಿ ನೋಟ್ ಚಲಾವಣೆ
ಮಂಗಳೂರು ಎಪ್ರಿಲ್ 17: ದೇಶದ ಕಪ್ಪು ಹಣ, ಭ್ರಷ್ಟಾಚಾರ ನಿಯಂತ್ರಣ, ನಕಲಿ ನೋಟು ಜಾಲ , ಅಕ್ರಮ ದಂಧೆಯನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ಸಾವಿರ ರೂಪಾಯಿ ನೋಟುಗಳ ನಿಷೇಧ ತಂದರೂ ನಕಲಿ ನೋಟುಗಳ ದಂಧೆ ಮಾತ್ರ ನಿಯಂತ್ರಣಕ್ಕೆ ಬಾರದೆ ಈಗ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕರಿಗೆ ಸಮಸ್ಯೆ ತಂದೊಡ್ಡಿದೆ ಮಂಗಳೂರು – ಭಟ್ಕಳ ರೂಟ್ ನ ಬಸ್ ನಲ್ಲಿ ನಕಲಿ ನೋಟ್ ಗಳು ಚಲಾವಣೆಯಾಗುತ್ತಿದ್ದು, ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಮಂಗಳೂರು – ಭಟ್ಕಳ ನಡುವೆ ರಾತ್ರಿ ಹೊತ್ತು ಸಂಚರಿಸುವ ಕೆಎಸ್ ಆರ್ ಟಿಸಿ ಐರಾವತ ಬಸ್ ಗಳಲ್ಲಿ ಈ ಕಳ್ಳ ನೋಟುಗಳ ಜಾಲ ಜೋರಾಗಿದ್ದು , ಇದಕ್ಕೆ ಬಸ್ ನಿರ್ವಾಹಕರು ಬಲಿಯಾಗುತ್ತಿದ್ದಾರೆ. ದೂರಕ್ಕೆ ಪ್ರಯಾಣಿಸುವ ಬಸ್ ಗಳಲ್ಲಿ ಕೆಲವು ಪ್ರಯಾಣಿಕರು ಜಂಕ್ಷನ್ ಗಳಲ್ಲಿ ಬಸ್ ಹತ್ತಿ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಅವರು ನಿರ್ವಾಹಕರಿಂದಲೇ ಟಿಕೆಟ್ ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಕಳ್ಳರಿಗೆ ಬಹಳ ಸುಲಭವಾಗಿದೆ.
ರಾತ್ರಿ ವೇಳೆ ಸಂಚರಿಸುವ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿರುವುದು, ಇದೇ ಸಮಯ ನೋಡಿ ಕಳ್ಳ ನೋಟುಗಳ ಚಲಾವಣೆಯಾಗುತ್ತಿದೆ. ಪ್ರಯಾಣಿಕರು ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಿರ್ವಾಹಕರಿಗೆ ನಕಲಿ ನೋಟಗಳನ್ನು ಪತ್ತೆ ಹಚ್ಚಲು ಸಮಯ ಕೂಡ ಇರುವುದಿಲ್ಲ.
ಆದರೆ ಸಂಗ್ರಹಿಸಲಾದ ಟಿಕೆಟ್ ಹಣ ಪಾವತಿಸುವ ವೇಳೆ ಕೌಂಟಿಂಗ್ ಮಿಷಿನ್ ನಲ್ಲಿ 2 ಸಾವಿರ ರೂಪಾಯಿ ನಕಲಿ ನೋಟುಗಳು ಪತ್ತೆಯಾಗುತ್ತಿದ್ದು , ಈ ಮೊತ್ತವನ್ನು ಅಧಿಕಾರಿಗಳ ಸೂಚನೆ ಮೇರೆಗೆ ನಿರ್ವಾಹಕನೇ ತನ್ನ ಸಂಬಳದಿಂದ ಭರಿಸಬೇಕಾಗುತ್ತದೆ.
ಕೆಎಸ್ ಆರ್ ಟಿಸಿಗೆ ಹೊಸದಾಗಿ ಸೇರುವ ಸಿಬ್ಬಂದಿಗಳಿಗೆ ಸಿಗುವ ಸಂಬಳ ಕಡಿಮೆಯಾಗಿರುತ್ತದೆ. ಈ ನಡುವೆ ಈ ತರಹದ ನಕಲಿ ನೋಟುಗಳ ಸಿಕ್ಕಿ ಬಿದ್ದರಂತೂ ಅವರ ಪರಿಸ್ಥಿತಿ ಶೋಚನಿಯವಾಗಿರುತ್ತದೆ. ಒಂದು 2 ಸಾವಿರ ರೂಪಾಯಿಯ ನಕಲಿ ನೋಟು ಸಿಕ್ಕಿದರೂ ನಿರ್ವಾಹಕ ತನ್ನ ಸಂಬಳದಿಂದ ಭರಿಸಬೇಕಾದ ಸನ್ನಿವೇಶ ಎದುರಾಗುತ್ತಿದೆ. ಅಲ್ಲದೇ ಈಗ ಚಲಾವಾಣೆಯಲ್ಲಿರುವ ನೋಟುಗಳ ಹೊಸ ನೋಟುಗಳಾದ್ದರಿಂದ ನಕಲಿ ನೋಟುಗಳು ಸಾಮಾನ್ಯ ನೋಟುಗಳಂತೆ ಕಾಣುತ್ತದೆ. ವ್ಯತ್ಯಾಸವೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಬಸ್ ನಿರ್ವಾಹಕರು.
You must be logged in to post a comment Login