KARNATAKA
ಸಾರ್ವಜನಿಕರಿಗೆ ಪಂಗನಾಮ- ಕೋಟ್ಯಾಂತರ ರೂಪಾಯಿ ವಂಚನೆ : ನಕಲಿ ಸೇನಾಧಿಕಾರಿ ಬಂಧನ…!
ಬೆಂಗಳೂರು : ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್, ಕಾರು ಖರೀದಿಸಿ ಕೊಡುತ್ತೇನೆ ಎಂದು ನಂಬಿಸಿ ಹತ್ತಾರು ಮಂದಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ನಕಲಿ ಸೇನಾಧಿಕಾರಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಳಗಾವಿ ಮೂಲದ ಅಂಜನೇಷ್ ಮಟಪತಿ(31) ಎಂದು ಗುರುತ್ತಿಸಲಾಗಿದೆ.
ಆರೋಪಿಯಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ, ಸಮವಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ವಂಚನೆ ಮಾಡಿದ್ದಾರೆ.
ನಾಗೇಂದ್ರ ದೂರದ ಸಂಬಂಧಿಯೊಬ್ಬರ ಮೂಲಕ ಪರಿಚಯವಾದ ಮಟಪತಿ, ತಾನೂ ಭಾರತಿಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಧೋಕ ಮಾಡಿದ್ದಾನೆ.
ಅಂಜನೇಷ್ ಮಟಪತಿ ಹಣ ವಂಚನೆ ಮಾತ್ರವಲ್ಲದೆ, ಮೂವರು ಯುವತಿಯರಿಗೂ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ವಂಚಿನೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಪೈಕಿ ಇಬ್ಬರು ಯುವತಿಯರ ಜತೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರ ಮಾಹಿತಿ ಕೊಟ್ಟಿದ್ದಾರೆ.ಬಂಧಿತ ಆರೋಪಿಯನ್ನು ಸುಬ್ರಹ್ಮಣ್ಯ ನಗರದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.