Connect with us

LATEST NEWS

ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ..ಆರೋಪಿ ಕಸ್ಟಮ್ಸ್ ವಶಕ್ಕೆ

ಮಂಗಳೂರು ಎಪ್ರಿಲ್ 09: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬನಿಂದ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ್ದ 647 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕೇರಳದ ಕಾಸರಗೋಡಿನ ಅಲಂಪಾಡಿ ನಿವಾಸಿ ಇಬ್ರಾಹಿಂ ಅಬ್ದುಲಾ ಎಂದು ಗುರುತಿಸಲಾಗಿದೆ.

ಸ್ಪೈಸ್ ಜೆಟ್ ವಿಮಾನ ಮೂಲಕ ದುಬೈ ನಿಂದ ಮಂಗಳೂರಿಗೆ ಬಂದಿಳಿದಿದ್ದ ಇಬ್ರಾಹಿಂ ಅಬ್ದುಲ್ಲಾ ನಿಂದ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಒಳ ಉಡುಪಿನಲ್ಲಿ 647 ಗ್ರಾಂ ಚಿನ್ನ ಅವಿತಿಟ್ಟು ಸಾಗಾಟಕ್ಕೆ ಯತ್ನ ಮಾಡುವಾಗ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ವಶ ಪಡಿಸಿಕೊಂಡಿದ್ದಾರೆ.