LATEST NEWS
ಕರಾವಳಿ ಕಾವಲು ಪಡೆ ಎಸ್ಪಿ ಹೆಸರಲ್ಲಿ ಫೇಕ್ ಅಕೌಂಟ್
ಉಡುಪಿ ಸೆಪ್ಟೆಂಬರ್ 18: ಸೆಲೆಬ್ರೆಟಿಗಳಿಗೆ ಮಾತ್ರ ಸಮಸ್ಯೆಯಾಗಿದ್ದ ಫೇಕ್ ಅಕೌಂಟ್ ಹಾವಳಿ ಈಗ ಪೊಲೀಸರಿಗೂ ತಟ್ಟಿದೆ. ಮಂಗಳೂರಿನಲ್ಲಿ ಪಿಎಸ್ಐ ಒಬ್ಬರ ಫೇಕ್ ಅಕೌಂಟ್ ಪ್ರಕರಣದ ನಂತರ ಈಗ ಉಡುಪಿಯಲ್ಲೂ ಪೊಲೀಸರ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಹಾವಳಿ ಪ್ರಾರಂಭವಾಗಿದೆ..
ಈ ಭಾರಿ ದುಷ್ಕರ್ಮಿಗಳು ಉಡುಪಿ ಕರಾವಳಿ ಕಾವಲು ಪಡೆಯ ಎಸ್ಪಿಯ ಪೋಟೋ ಬಳಸಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ಉಡುಪಿಯ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್ ಕುಮಾರ್ ಆರ್ ಫೊಟೋ ಬಳಸಿ ಕೋಸ್ಟಲ್ ಎಸ್ಪಿ-ಎಸ್ .ಪಿ. ಸಿಂಗ್ ಹೆಸರಲ್ಲಿ ಫೇಕ್ ಐಡಿ ಕ್ರಿಯೆಟ್ ಮಾಡಿ ಇಂದು ಅಕೌಂಟ್ ಓಪನ್ ಮಾಡಿದ್ದಾರೆ. ಅಕೌಂಟ್ ಓಪನ್ ಆದ ಅರ್ಧಗಂಟೆಯಲ್ಲಿ ನಕಲಿ ಅಕೌಂಟ್ ನ್ನು ಪತ್ತೆ ಮಾಡಲಾಗಿದೆ. ಸ್ಥಳೀಯ ಮತ್ತು ಬೆಂಗಳೂರು ಸೈಬರ್ ಕ್ರೈಂ ಗೆ ಚೇತನ್ ಕುಮಾರ್ ದೂರು ನೀಡಿದ್ದಾರೆ. ಅಲ್ಲದೆ ಫೇಸ್ ಬುಕ್ ಗೂ ಎಸ್ಪಿ ಚೇತನ್ ಕುಮಾರ್ ದೂರು ನೀಡಿದ್ದಾರೆ. ಈಗಾಗಲೇಲ ಹಲವು ಇದೇ ರೀತಿಯ ನಕಲಿ ಅಕೌಂಟ್ ಗಳನ್ನು ಕ್ರಿಯೆಟ್ ಮಾಡಿ ಹಣ ದೋಚುವ ವ್ಯವಸ್ಥಿತ ದಂಧೆ ನಡೆಯುತ್ತಿದೆ. ಪೊಲೀಸರ ಹೆಸರಲ್ಲಿ ನಕಲಿ ಅಕೌಂಟ್ ತೆರೆದು ಹಣ ದೋಚುವ ಪ್ರಯತ್ನ ಇದಾಗಿದೆ ಎಂದು ಅಂದಾಜಿಸಲಾಗಿದೆ.