LATEST NEWS
ಅನ್ಯ ಧರ್ಮದವರೊಂದಿಗೆ ಹಿಂದೂ ಹುಡುಗಿಯರಿದ್ದರೆ ಧರ್ಮದೇಟು ಗ್ಯಾರಂಟಿ
ಅನ್ಯ ಧರ್ಮದವರೊಂದಿಗೆ ಹಿಂದೂ ಹುಡುಗಿಯರಿದ್ದರೆ ಧರ್ಮದೇಟು ಗ್ಯಾರಂಟಿ
ಮಂಗಳೂರು ಜನವರಿ 3: ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ವಿಧ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಾದ ಸಂಪತ್ ಶೆಟ್ಟಿ ಸೇರಿದಂತೆ ವರದರಾಜ್, ದಿನೇಶ್ ಎಂಬವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆದರೆ ಪಿಲಿಕುಳ ನಿಸರ್ಗಧಾಮದಲ್ಲಿ ವಿಧ್ಯಾರ್ಥಿನಿಯ ಮೇಲೆ ನಡೆಸಲಾದ ಹಲ್ಲೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ. ಈ ನಡುವೆ ವಿಧ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯನ್ನು ಕೆಲ ಹಿಂದೂ ಸಂಘಟನೆಗಳು ಸಮರ್ಥಿಸಿವೆ. ವೀರ ಕೇಸರಿ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಅನ್ಯಕೋವಿನ ವಿಧ್ಯಾರ್ಥಿಗಳೊಂದಿಗೆ ಸುತ್ತಾಡುವ ಹಿಂದೂ ಯುವತಿಯರಿಗೆ ಕಪಾಳ ಮೋಕ್ಷ ಖಂಡಿತ ಎನ್ನುವ ಎಚ್ಚರಿಕೆ ನೀಡಲಾಗಿದೆ.
” ಬುದ್ದಿ ಮಾತು ಹೇಳಿದ್ದಾಯಿತು, ಮನವರಿಕೆ ಮಾಡಿದ್ದಾಯಿತು, ಎಚ್ಚರಿಕೆ ಕೊಟ್ಟಿದ್ದಾಯಿತು. ಇನ್ನೆನಿದ್ದರೂ ಕಪಾಳಕ್ಕೆ ಬಾರಿಸುವುದೊಂದೇ ದಾರಿ ಎಂದು ಎಚ್ಚರಿಕೆ ನೀಡಲಾಗಿದೆ. ”
ಮೂಡಬಿದ್ರೆಯ ಆಸುಪಾಸಿನ ಎಲ್ಲಾ ಹುಡುಗರಿಗೆ ಕೊನೆಯ ಎಚ್ಚರಿಕೆ ಎಂದು ಫೇಸ್ ಬುಕ್ ಖಾತೆಯಲ್ಲಿ ಹೇಳಲಾಗಿದ್ದು, ಕಾಲೇಜಿನಲ್ಲಿ ತಮ್ಮ ಸಹಪಾಠಿ ಎಂಬ ಸಲುಗೆಯಿಂದ ಅನ್ಯ ಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಕಂಡು ಬಂದರೆ ಹಿಂದೂ ವಿಧ್ಯಾರ್ಥಿನಿಯರಿಗೆ ಧರ್ಮದೇಟು ಗ್ಯಾಂರಟಿ ಎಂದು ಎಚ್ಚರಿಸಲಾಗಿದೆ. ವಿಧ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸುವ ಬಹಿರಂಗವಾಗಿ ಎಚ್ಚರಿಕೆ ನೀಡಿರುವ ಬಗ್ಗೆ ಈಗ ಚರ್ಚೆ ಆರಂಭವಾಗಿದ್ದು ಈ ಫೇಸ್ ಬುಕ್ ಖಾತೆ ವಿರುದ್ದ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
You must be logged in to post a comment Login