KARNATAKA
ಫೇಸ್‌ಬುಕ್ ಮೆಸೆಂಜರ್ ಫಾರ್‌ವರ್ಡ್ ಮೆಸೇಜ್‌ಗೂ ಮಿತಿ!
ಬೆಂಗಳೂರು : ಸುಳ್ಳು ಸುದ್ದಿ ಹರಡದಂತೆ ಈಗಾಗಲೇ ವಾಟ್ಸಪ್‌ನಲ್ಲಿ ಈ ಆಯ್ಕೆ ಇದೆ. ಅದರಂತೆಯೇ ಫೇಸ್‌ಬುಕ್ ಮೂಲಕವೂ ನಕಲಿ ಸುದ್ದಿ ಮತ್ತು ತಿರುಚಿದ ಮಾಹಿತಿ, ವೈರಲ್ ನ್ಯೂಸ್ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಸುಳ್ಳು ಸುದ್ದಿ ಮತ್ತು ವೈರಲ್, ನಕಲಿ ವಿಚಾರ ತಡೆಗೆ ಫೇಸ್‌ಬುಕ್ ವಿವಿಧ ಯತ್ನ ನಡೆಸುತ್ತಿದೆ. ಫೇಸ್‌ಬುಕ್ ಮತ್ತು ವಾಟ್ಸಪ್ ಮೂಲಕ ಅತ್ಯಂತ ಹೆಚ್ಚಿನ ಸುಳ್ಳು ಸುದ್ದಿ ಹರಡುತ್ತಿದ್ದು, ಅದನ್ನು ತಡೆಯಲು ಈಗಾಗಲೇ ವಾಟ್ಸಪ್‌ನಲ್ಲಿ ಫಾರ್‌ವರ್ಡ್ ಮಿತಿ ಮತ್ತು ಅತಿ ಹೆಚ್ಚು ಬಾರಿ ಫಾರ್ಡ್ ವರ್ಡ್ ಆಗಿರುವ ಸುದ್ದಿಗಳಿಗೆ ಫಾರ್‌ವರ್ಡೆಡ್ ಟ್ಯಾಗ್ ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ ತಕ್ಕಮಟ್ಟಿಗೆ ನಕಲಿ ಸುದ್ದಿ ತಡೆಗೆ ಫೇಸ್‌ಬುಕ್ ಶ್ರಮಿಸುತ್ತಿದೆ. ಅದೇ ಮಾದರಿಯಲ್ಲಿ ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲೂ ಫಾರ್‌ವರ್ಡ್ ಸಂದೇಶ ಮಿತಿಯನ್ನು ಪರಿಚಯಿಸಲಾಗುತ್ತಿದೆ. ಅಂದರೆ, ಮೆಸೆಂಜರ್ ಮೂಲಕ ಒಂದು ಸಂದೇಶವನ್ನು ಒಮ್ಮೆಗೆ ಐದು ಜನರಿಗೆ ಅಥವಾ ಗ್ರೂಪ್‌ಗೆ ಕಳುಹಿಸಲು ಸಾಧ್ಯವಾಗುತ್ತದೆ.
ಅದರ ಹೊರತಾಗಿ, ಒಮ್ಮೆಗೆ ಐದಕ್ಕಿಂತ ಹೆಚ್ಚಿನ ಜನರಿಗೆ ಒಂದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ. ಈಗಾಗಲೇ ವಾಟ್ಸಪ್‌ನಲ್ಲಿ ಈ ಆಯ್ಕೆ ಇದೆ. ಅದರಂತೆಯೇ ಫೇಸ್‌ಬುಕ್ ಮೂಲಕವೂ ನಕಲಿ ಸುದ್ದಿ ಮತ್ತು ತಿರುಚಿದ ಮಾಹಿತಿ, ವೈರಲ್ ನ್ಯೂಸ್ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಮೆಸೆಂಜರ್ ಮೂಲಕ ಒಂದೇ ಸಂದೇಶವನ್ನು ಐದಕ್ಕಿಂತ ಹೆಚ್ಚಿನ ಜನರಿಗೆ ಕಳುಹಿಸಲು ಯತ್ನಿಸಿದರೆ, ಫಾರ್‌ವರ್ಡಿಂಗ್ ಲಿಮಿಟ್ ರೀಚ್‌ಡ್ ಎನ್ನುವ ಫ್ಲ್ಯಾಶ್ ಸಂದೇಶ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಬಳಕೆದಾರರು ಹೊಸ ಅಪ್‌ಡೇಟ್ ಬಗ್ಗೆ ಗಮನಿಸಿ, ಫಾರ್‌ವರ್ಡ್ ಸಂದೇಶಗಳಿಗೆ ಮಿತಿ ಹೇರಲು ಸಾಧ್ಯವಾಗುತ್ತದೆ.