DAKSHINA KANNADA
ಎಕ್ಸ್ ಪ್ರೆಸ್ ಬಸ್ ದುರ್ವರ್ತನೆ: ಹಿರಿಯ ನಾಗರಿಕನನ್ನು ನಿಂದಿಸಿ ಬಸ್‌ನಿಂದ ಇಳಿಸಿದ ಕಂಡಕ್ಟರ್

ಎಕ್ಸ್ ಪ್ರೆಸ್ ಬಸ್ ದುರ್ವರ್ತನೆ: ಹಿರಿಯ ನಾಗರಿಕನನ್ನು ನಿಂದಿಸಿ ಬಸ್‌ನಿಂದ ಇಳಿಸಿದ ಕಂಡಕ್ಟರ್
ಮಂಗಳೂರು, ಫೆಬ್ರವರಿ 07 : ತಿಳಿಯದೇ ಮೂಡಬಿದ್ರೆಗೆ ಹೋಗುವ ಎಕ್ಸ್ ಪ್ರೆಸ್ ಬಸ್ ಹತ್ತಿದ ಹಿರಿಯ ನಾಗರಿಕರೊಬ್ಬರಿಗೆ ಬಸ್ ನಿರ್ವಾಹಕನೊಬ್ಬ ಸಾರ್ವಜನಿಕರ ಎದುರಲ್ಲೇ ಅವಾಚ್ಯವಾಗಿ ನಿಂದಿಸಿ, ದಾರಿ ಮಧ್ಯೆ ಬಲವಂತದಿಂದ ಕೆಳಗಿಳಿಸಿ ಅನಾಗರಿಕ ವರ್ತನೆ ತೋರಿದ ಘಟನೆ ಬುದ್ದಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ನಿನ್ನೆ ನಡೆದಿದೆ.
ಬಸ್‌ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಅವರದೇ ಮಾತಿನಲ್ಲಿ ಘಟನೆಯ ಬಗ್ಗೆ ಹೇಳಿದ್ದ ಸಾರಾಂಶ ಇಲ್ಲಿದೆ.

ಮೂಡಬಿದ್ರೆ-ಮಂಗಳೂರು-ಕಾರ್ಕಳ ಮಾರ್ಗವಾಗಿ ಚಲಿಸುವ ಶ್ರೀರಾಜ್ ಗಾಡಿ ಸಂಖ್ಯೆ : KA 19 AB 5659 ಬಸ್ ನಲ್ಲಿ ದಿನಾಂಕ :- 6.02.2019 ರಂದು ಸಂಜೆ 4 ಗಂಟೆಗೆ ನಡೆದ ನೈಜ ಘಟನೆ..
3.50 ಕ್ಕೆ ಮೂಡಬಿದ್ರೆಯಿಂದ ಮಂಗಳೂರಿಗೆ ಶ್ರೀರಾಜ್ ಬಸ್ ಹೊರಟಿತ್ತು…. ಎಡಬದಿಯ ಕೊನೆಯ ಸೀಟಿನಲ್ಲಿ ಒಬ್ಬ ಹಿರಿಯರು ಕೂತಿದ್ದರು… ಅವರಿಗೆ ತೋಡಾರು ಬಳಿ ಇಳಿಯಬೇಕಾಗಿತ್ತು… ಕಂಡಕ್ಟರ್ ಟಿಕಟ್ ಕೇಳುತ್ತ ಬಂದ… ಹಾಗೆ ಆ ಹಿರಿಯರ ಬಳಿ ಟಿಕೆಟ್ ಕೇಳಿದಾಗ ಅವರು ತೋಡರ್ ಗೆ ಟಿಕಟ್ ಎಂದು ಹೇಳಿದರು… ತೋಡರ್ ಎಂದು ಹೇಳಿದ ತಕ್ಷಣ ಹಿರಿಯರು ಎಂದು ನೋಡದೆ ದಾನೆ ಅರ್ಥ ಆಪುಜ. ಬಸ್ ಸ್ಟ್ಯಾಂಡ್ ಡ್ ಆತ್ ಸಲ ಎಕ್ಸಪ್ರೆಸ್ ಪಂದ್ ಬೊಬ್ಬೆ ಪಾಡುಂಡಲ ಕೆಬಿ ಕೇನುಜ… ಕಣ್ಣ ಪುಡದುಂಡ ಬಸ್ ಡ್ ಎಕ್ಸಪ್ರೆಸ್ ಬರೆತಿನ ತೋಜೂಜಾ… ನಿಕ್ಲೆಗ್ ಲೋಕಲ್ ಬಸ್ ಇಜ್ಜ…. ಜಪ್ಪುಲೆಯೇ ತಿರ್ತು… ಲಕ್ಕುಲೆಯೇ… ಈ ರೀತಿ ತುಳುವಿನಲ್ಲಿ ಮತ್ತೆ ಅವ್ಯಾಚ ಶಬ್ದಗಳಿಂದ ಬೈದು ನಿಂದಿಸಿದರು…
ಆ ಹಿರಿಯರ ಪರವಾಗಿ ಮತ್ತೊಬ್ಬ ಪ್ರಯಾಣಿಕ ದ್ವನಿ ಎತ್ತಿದರು.. ಅವರು ಕಂಡಕ್ಟರ್ ಬಳಿ ಕೇಳಿದರು ನಿಮಗೆ ಜನ ಇದ್ದರೆ ಎಲ್ಲಿ ಬೇಕಾದರು ಸ್ಟಾಪ್ ಕೊಡುತ್ತೀರಿ… ಅವರು ಹಿರಿಯರು ಎಕ್ಸಪ್ರೆಸ್ ಎಂದು ತಿಳಿಯದೆ ಹತ್ತಿದರು… ಅದಕ್ಕೆ ಅಷ್ಟು ಮಾತನಾಡಬೇಕಾ ಎಂದು ಕೇಳಿದರು… ಆದರೆ ಈ ಗಡ್ಡ ಬಿಟ್ಟ ಕಂಡಕ್ಟರ್ ತಾನೇ ದೊಡ್ಡ ಬಸ್ ನ ಯಜಮಾನನಂತೆ, ಅವರಿಗೂ ಮರ್ಯಾದೆ ಕೊಡದೆ, ಈ ಏರಿಯಾ…? ನಿಕ್ ದಾದ ಆವೊಡ್..? ಪೊಲೆ ಕಂಪ್ಲೇಂಟ್ ಮಲ್ಪುವಾರ್ಡ ಮಲ್ಪುಲೇ… ದಾದ ಮಲ್ಪುವರ್ ತೂಪೇ…? ಈ ರೀತಿ ಹಲವು ಪ್ರಶ್ನೆ ಕೇಳಿ ನಂತರ ಅವರಿಗೂ ನಿಂದಿಸಿದ್ದಾನೆ…
ಈ ರೀತಿ ತನ್ನ ತಂದೆಯ ಪ್ರಾಯ ಆಗಿರುವ ಆ ಹಿರಿಯ ವ್ಯಕ್ತಿಗೆ ಅವರ ಪ್ರಾಯಕ್ಕೂ ಮರ್ಯಾದೆ ಕೊಡದೆ ದರ್ಪದಿಂದ ಮಾತನಾಡಿದ ಆತನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರು ಒತ್ತಾಯಿಸಿದ್ದಾರೆ.