ಉಳ್ಳಾಲದಲ್ಲಿ ಕಟ್ಟಡದಿಂದ ಬಿದ್ದು ಅನುಮನಾಸ್ಪದವಾಗಿ ಸಾವನ್ನಪ್ಪಿದ ಯುವಕ

ಮಂಗಳೂರು, ಫೆಬ್ರವರಿ 07 : ಯುವಕನೋರ್ವ ಕಟ್ಟಡದಿಂದ ಬಿದ್ದು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡು ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸ್ಥಳೀಯ ಅಂಬಿಕಾರೋಡ್ ನಿವಾಸಿ ನಿಶಾನ್ (26) ಎಂದು ಗುರುತ್ತಿಸಲಾಗಿದೆ.

ರಿಕ್ಷಾ ಚಾಲಕ ವಿಜಯ್ ಎಂಬರ ಪುತ್ರನಾಗಿರುವ ನಿಶಾನ್ ಮಾದಕ ವ್ಯಸನಿಯಾಗಿದ್ದು ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ತಿಳಿದು ಬಂದಿದೆ. ಮೀರಾ ಆಚಾರಿ ಎಂಬವರ ಮನೆ ಅಂಗಳದಲ್ಲಿ ನಿಶಾನ್ ಅವರ ಶವ ಪತ್ತೆಯಾಗಿದ್ದು,ಹತ್ತಿರದ ಭಗವತಿ ಕಾಂಪ್ಲೆಕ್ಸ್ ನಿಂದ ಬಿದ್ದು ಸತ್ತಿರುವ ಶಂಕೆವ್ಯಕ್ತವಾಗಿದೆ.

ಮೃತದೇಹದ ಕೈಯೊಂದು ಮುರಿದಿದ್ದು,ತಲೆಗೆ ಯಾವುದೇ ಗಾಯಗಳಾಗಿಲ್ಲ.

ಈ ಹಿನ್ನೆಲೆಯಲ್ಲಿ ನಿಶಾನ್ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

2 Shares

Facebook Comments

comments