ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು, ಫೆಬ್ರವರಿ 07 : ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ 12 ಜನ ಆರೋಪಿಗಳನ್ನು ಮಂಗಳೂರಿನ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ನಗರದ ಮಾರ್ನಮಿಕಟ್ಟೆ 1 ನೇ ರೈಲ್ವೇ ಬಿಡ್ಜ್ ಬಳಿಯ ಖಾಲಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದರು. ಇದರ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜುಗಾರಿಗೆ ಬಳಸಿದ 8380 ರೂ ನಗದು ಹಣ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಬಂಧಿತರನ್ನು ಸುರತ್ಕಲಿನ ಗಣೇಶ, ಜೆಪ್ಪು ಬಪ್ಪಾಲಿನ ಸಚಿನ್‌, ಬೋಳಾರದ ಪ್ರವೀಣ್‌, ಕಾಸರಗೋಡು ಮಂಜೇಶ್ವರದ ಭಾಸ್ಕರ,ಉಳ್ಳಾಲದ ಮುಸ್ತಫಾ ಸದಬ್ಬ, ಕೊಣಾಜೆಯ ಉದಯ,ಬೋಳಾರ ಎಮ್ಮೆಕರೆಯ ಶಹನವಾಜ್‌, ರಾಘವೇಂದ್ರ ಮಠದ ಬಳಿಯ ಕಿರಣ್‌ ಕುಮಾರ್‌, ಅತ್ತಾವರದ ಸುಧಾಕರ,ಕಾಟಿಪಳ್ಳದ ಹೇಮಂತ್‌,ಬೆಂಗ್ರೆಯ ಪುರಂದರ, ಹಾಗೂ ಬಂಟ್ವಾಳ ಜಾರಂದ ಗುಡ್ಡೆಯ ಪ್ರವೀಣ್‌ ಎಂದು ಗುರುತ್ತಿಸಲಾಗಿದೆ. ಆರೋಪಿ ಮತ್ತು ಸೊತ್ತುಗಳಣ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.

Facebook Comments

comments