LATEST NEWS
ಉಡುಪಿಯಲ್ಲಿ ವಿಪರೀತ ಸಾಲಬಾಧೆಗೆ ಜೀವತೆತ್ತ ವ್ಯಕ್ತಿ..!

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ವಿಪರೀತ ಸಾಲಭಾಧೆಯಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚುಗೋಡಿನ ಸನ್ಯಾಸಿಬಲ್ಲೆಯ ನಿವಾಸಿಯಾದ ದೇವದಾಸ್ ಖಾರ್ವಿ (50) ಯವರು ಸಾಲಬಾಧೆಯಿಂದ ಜೀವತೆತ್ತ ವ್ಯಕ್ತಿಯಾಗಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದೇವದಾಸ್ ಖಾರ್ವಿ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
