Connect with us

DAKSHINA KANNADA

ಪೋಲೀಸರನ್ನ ತನಗನಿಸಿದಂತೆ ಕುಣಿಸುವುದರಲ್ಲಿ ಸೈ ಆದರೇ ರಮಾನಾಥ ರೈ!

ಪೋಲೀಸರನ್ನ ತನಗನಿಸಿದಂತೆ ಕುಣಿಸುವುದರಲ್ಲಿ ಸೈ ಆದರೇ ರಮಾನಾಥ ರೈ!

ಮಂಗಳೂರು, ಸೆಪ್ಟಂಬರ್ 19: ಓಸಿ ಜೀವನವೇ ಲೇಸು ಸರ್ವಜ್ಞ ಎನ್ನುವಂತೆ ಕೆಲವು ಮಂದಿ ತನಗೆ ಅರ್ಹತೆ ಇಲ್ಲದಿದ್ದರೂ, ಸರಕಾರದ ಕೆಲವೊಂದು ಸೌಲಭ್ಯಗಳನ್ನು ದುರುಪಯೋಗಪಡಿಸೋದು ಸಾಮಾನ್ಯ.

ತನ್ನ ಬಳಿ ಅಧಿಕಾರವಿದ್ದಾಗ ಸರಕಾರದ ಸೌಲಭ್ಯಗಳನ್ನು ಪಡೆದರೆ ಅದನ್ನು ಪ್ರಶ್ನಿಸೋದು ಅಭಾಸವಾಗುತ್ತದೆ.

ಆದರೆ ಯಾವುದೇ ಅಧಿಕಾರವಿಲ್ಲ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಏನೆನ್ನಬೇಕು.

ಇಲ್ಲಿ ಹೇಳ ಹೊರಟಿರೋದು ಮಾಜಿ ಸಚಿವ, ಬಂಟ್ವಾಳದ ಮಾಜಿ ಶಾಸಕ ಬಿ. ರಮಾನಾಥ ರೈ ನಡೆಯನ್ನು.

ರಮಾನಾಥ ರೈ ಇದೀಗ ಕೇವಲ ಒರ್ವ ಮಾಜಿ ಶಾಸಕರಾಗಿದ್ದರೂ, ಅವರು ಇಂದಿಗೂ ಸರಕಾರದ ಹಲವು ಸೌಲಭ್ಯಗಳನ್ನು ಪುಕ್ಕಟೆಯಾಗಿ ಪಡೆಯುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ.

ಮಾಜಿ ಶಾಸಕರೊಬ್ಬರಿಗೆ ಫುಲ್ ಪೋಲೀಸ್ ಎಸ್ಕಾರ್ಟ್ ಸೌಲಭ್ಯ ಪಡೆಯುತ್ತಿರೋದು ರಮಾನಾಥ ರೈ ಮಾತ್ರವಾಗಿದ್ದಾರೆ.

ಭಾರೀ ಪ್ರಮಾಣದ ಬೆದರಿಕೆಯಿರುವ ರಾಜಕೀಯ ಮುಖಂಡರಿಗೆ ಇಂಥ ಭದ್ರತೆಯನ್ನು ನೀಡಲು ಅವಕಾಶಗಳಿದ್ದರೂ, ರಮಾನಾಥ ರೈಗೆ ಅಷ್ಟೊಂದು ಪ್ರಮಾಣದ ಬೆದರಿಕೆ ಇರೋದು ರಾಜ್ಯದ ಜನರ ಗಮನಕ್ಕೆ ಈವರೆಗೂ ಬಂದಿಲ್ಲ ಎನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ.

ಹಾಗಿದ್ದರೂ ರಮಾನಾಥ ರೈ ಗೆ ಒಬ್ಬ ಎ.ಆರ್.ಎಸ್.ಐ, ಡ್ರೈವರ್ ಇರುವ ಎಸ್ಕಾರ್ಟ್ ಜೀಪಿನ ಜೊತೆಗೆ ಮನೆ ಕಾಯಲೆಂದು ಎರಡು ಡಿ.ಎ.ಆರ್ ಪೋಲೀಸ್ ಹಾಗೂ ಒರ್ವ ಗನ್ ಮ್ಯಾನ್ ಗಳಿದ್ದಾರೆ.

ಅಂದರೆ ಯಾವುದೇ ಬೆದರಿಕೆಯಿಲ್ಲದ ರಮಾನಾಥ ರೈಯವರನ್ನು ಬರೋಬ್ಬರಿ ಐದು ಪೋಲೀಸರು ಅವರು ಹೋದಲೆಲ್ಲಾ ಹಿಂಬಾಲಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ರಮಾನಾಥ ರೈ ಪಾಲ್ಗೊಳ್ಳುವ ಮದುವೆ, ಮುಂಜಿ, ಕಾಂಗ್ರೇಸ್ ಪಕ್ಷದ ಸಭೆಗಳು ಸೇರಿದಂತೆ ಮೊನ್ನೆ ಮೊನ್ನೆ ನಡೆದ ಭಾರತ್ ಬಂದ್ ಸಂದರ್ಭದಲ್ಲೂ ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡುವ ಸಂದರ್ಭದಲ್ಲೂ ಈ ಪೋಲೀಸರು ರಮಾನಾಥ ರೈ ಅವರನ್ನು ಹಿಂಬಾಲಿಸಿದ್ದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂಟು ಮಂದಿ ಶಾಸಕರಿದ್ದು, ಇವರಲ್ಲಿ ಉಳ್ಳಾಲ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ಹೊರತುಪಡಿಸಿ ಯಾವೊಬ್ಬರಿಗೂ ಗನ್ ಮ್ಯಾನ್ ಗಳಿಲ್ಲ.

ಅಲ್ಲದೆ ಈ ಹಿಂದೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮೊಯಿದೀನ್ ಬಾವಾ ಕೂಡಾ ತನಗೆ ಗನ್ ಮ್ಯಾನ್ ನೀಡಬೇಕೆಂಬ ಬೇಡಿಕೆ ಪೋಲೀಸರ ಮುಂದೆ ಇಟ್ಟ ಸಂದರ್ಭದಲ್ಲಿ ಶಾಸಕರಿಗೆ ಯಾವುದೇ ಬೆದರಿಕೆ ಇಲ್ಲದ ಹಿನ್ನಲೆಯಲ್ಲಿ ಗನ್ ಮ್ಯಾನ್ ನೀಡಲು ಇಲಾಖೆ ಹಿಂಜರಿದಿತ್ತು.

ಆದರೆ ರಮಾನಾಥ ರೈಯವರಿಗೆ ಯಾವುದೇ ಬೆದರಿಕೆಯೂ ಇಲ್ಲದೇ ಇದ್ದರೂ, ಪೋಲೀಸ್ ಎಸ್ಕಾರ್ಟ್ ಜೊತೆಗೆ ಇಷ್ಟೊಂದು ಪೋಲೀಸರನ್ನು ನೀಡಿರುವುದರ ಹಿಂದಿನ ಮರ್ಮವೇನು ಎನ್ನುವುದು ಸ್ಪಷ್ಟವಾಗಬೇಕಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪೋಲೀಸರ ಕೊರತೆಯಿದ್ದು, ಹೀಗಿದ್ದರೂ ತಮ್ಮ ವೈಯುಕ್ತಿಕ ಕಾರ್ಯಕ್ರಮಗಳಿಗಾಗಿ ಪೋಲೀಸರನ್ನು ಈ ರೀತಿ ಬಳಸಿಕೊಳ್ಳೋದು ಎಷ್ಟು ಸರಿ ಎನ್ನೋದು ಪ್ರಜ್ಞಾವಂತರಿಗೆ ಕಾಡೋ ಪ್ರಶ್ನೆಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *