Connect with us

    DAKSHINA KANNADA

    ಕರ್ತವ್ಯದಲ್ಲೇ ಕಂಠಪೂರ್ತಿ ಮದ್ಯಸೇವನೆ, ಪೋಲೀಸ್ ಪೇದೆ ಅಮಾನತು

    ಕರ್ತವ್ಯದಲ್ಲೇ ಕಂಠಪೂರ್ತಿ ಮದ್ಯಸೇವನೆ, ಪೋಲೀಸ್ ಪೇದೆ ಅಮಾನತು

    ಮಂಗಳೂರು, ಸೆಪ್ಟಂಬರ್ 19 : ಕರ್ತವ್ಯದಲ್ಲಿರುವಾಗಲೇ ಕುಡಿದು ಕರ್ತವ್ಯ ಲೋಪವೆಸಗಿದ ಮಂಗಳೂರು ಪಶ್ಚಿಮ ವಲಯ ಟ್ರಾಫಿಕ್ ಪೋಲೀಸ್ ಆಶೋಕ್ ಗೌಡರನ್ನು ಹಿರಿಯ ಪೋಲೀಸ್ ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಇಂದು ಬೆಳಿಗ್ಗೆ ಲಾಲ್ ಬಾಗ್ ನಲ್ಲಿ ಕರ್ತವ್ಯ ನಿರತರಾಗಿದ್ದ ಇವರು ಟ್ರಾಫಿಕ್ ಕ್ಲಿಯರ್ ಮಾಡುವುದನ್ನು ಬಿಟ್ಟು ಕಂಠಪೂರ್ತಿ ಕುಡಿದು ಟ್ರಾಫಿಕ್ ಸಮಸ್ಯೆಗೆ ಕಾರಣರಾಗಿದ್ದರು.

    ಕುಡಿದ ನಶೆಯಲ್ಲಿ ರಸ್ತೆ ಮಧ್ಯದಲ್ಲೇ ನಿಲ್ಲುತ್ತಿದ್ದ ಇವರ ವರ್ತನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.

    ಇದರಿಂದ ಎಚ್ಚೆತ್ತ ಹಿರಿಯ ಅಧಿಕಾರಿಗಳು ಟ್ರಾಫಿಕ್ ಪೋಲೀಸ್ ಆಶೋಕ್ ಗೌಡರಿಗೆ ಅಮಾನತಿನ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply