Connect with us

DAKSHINA KANNADA

ಡ್ಯೂಟಿಯಲ್ಲೇ ಟೈಟಾದ ಪೋಲೀಸಪ್ಪ

ಡ್ಯೂಟಿಯಲ್ಲೇ ಟೈಟಾದ ಪೋಲೀಸಪ್ಪ

ಮಂಗಳೂರು, ಸೆಪ್ಟಂಬರ್ 19: ಡ್ಯೂಟಿಯಲ್ಲಿರುವಾಗಲೇ ಪೊಲೀಸ್ ಪೇದೆಯೊಬ್ಬ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯದಲ್ಲಿದ್ದಾಗಲೇ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಾಗ ಸಾರ್ವಜನಿಕರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

ಟ್ರಾಫಿಕ್ ಪೇದೆ ಅಶೋಕ್ ಗೌಡ ಎಂಬಾತನಾಗಿದ್ದು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ.

ಮಂಗಳೂರಿನ ಲಾಲ್ ಬಾಗಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಜನನಿಬಿಡ ಪ್ರದೇಶದಲ್ಲಿ ಘಟನೆ ನಡೆದಿದೆ.

ಕರ್ತವ್ಯದಲ್ಲಿರುವ ಮಧ್ಯೆ ಪೊಲೀಸರು ಕುಡಿಯುವುದು ನಿಷಿದ್ಧ.

ಹಾಗಿದ್ದರೂ, ಈತ ಯೂನಿಫಾರ್ಮ್ ನಲ್ಲಿದ್ದುಕೊಂಡೇ ಕುಡಿದು ತೂರಾಡಿದ್ದಲ್ಲದೆ ರಸ್ತೆ ಮಧ್ಯೆ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದಾನೆ.

ವಾಹನ ಡಿಕ್ಕಿಯಾಗುವ ಹಂತದಲ್ಲಿದ್ದಾಗ ಸಾರ್ವಜನಿಕರು ಸೇರಿ ಪೊಲೀಸ್ ಪೇದೆಯನ್ನು ಹಿಡಿದು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿದ್ದಾರೆ.

ಪೋಲೀಸಪ್ಪನ ಈ ನಶಾವತಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.

ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಈ ವಿಡಿಯೋ ಬಂದಲ್ಲಿ ಪೋಲೀಸಪ್ಪನ ನಶೆ ಇಳಿಯಲಿದೆ ಎನ್ನುವ ಮಾತೂ ಹರಿದಾಡಲಾರಂಭಿಸಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ