Connect with us

    BANTWAL

    RSS ನಾಯಕರ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಮಾಜಿ ಸಿಎಂ HD ಕುಮಾರಸ್ವಾಮಿ ಅತಿಥಿ..!

    ಬಂಟ್ವಾಳ: ಆರ್‌ಎಸ್‌ ಎಸ್‌ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಾರಥ್ಯದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ  ಸಿಎಂ ಹೆಚ್ ಡಿ ಕುಮಾರಸ್ವಾಮೀ ಭಾಗವಹಿಸಲಿದ್ದಾರೆ ಎಂದ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

    ರಾಜ್ಯದಲ್ಲಿ ಗುರುತಿಸಲ್ಪಡುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ( ರಿ.) ಕಲ್ಲಡ್ಕ, ಇಲ್ಲಿನ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.9 ರಂದು ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
    ಕಳೆದ ಬಾರಿ ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆಗಮಿಸಿದ್ದರು. ಮಳೆಯ ನಡುವೆಯೂ ಛತ್ರಿಯನ್ನು ಹಿಡಿದು ಇಲ್ಲಿನ ಕ್ರೀಡೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
    ಆದರೆ ಕಳೆದ ಅನೇಕ ವರ್ಷಗಳ ಕ್ರೀಡೋತ್ಸವವನ್ನು ಗಮನಿಸಿದಾಗ ಈ ಬಾರಿ ಮೃದು ಹಿಂದುತ್ವದತ್ತ ವಾಲಿದ, ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ಮತ್ತು ದತ್ತ ಪೀಠಕ್ಕೆ ಮಾಲಾಧಾರಣೆ ಮಾಡಿ ಹೋಗುವುದಾಗಿ ಹೇಳಿಕೆ ನೀಡಿ ರಾಜ್ಯದಲ್ಲಿ ಒಂದು ರೀತಿಯ ಬಿರುಗಾಳಿ ಎಬ್ಬಿಸಿರುವ ಕುಮಾರ ಸ್ವಾಮಿ ಆಗಮನ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.
    ಹೆಚ್ಚಾಗಿ ಹಿಂದುತ್ವದ ಸಿದ್ದಾಂತದ ಮೇಲೆ ನಾಯಕರೆನಿಸಿದವರು ಈ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಂಡು ಬಂದಿದೆಯಾದರೂ, ಹೊರರಾಜ್ಯದಿಂದ ಬೇರೆ ಬೇರೆ ಪಕ್ಷಗಳ ನಾಯಕರು ಕ್ರೀಡೋತ್ಸವದಲ್ಲಿ ಭಾಗವಹಿಸಿದ ನಿದರ್ಶನಗಳು ಇವೆ.
    ಈ ಬಾರಿ ಬಿಜೆಪಿಯ ಉನ್ನತ ನಾಯಕರನ್ನು ಹೊರತುಪಡಿಸಿ ಬಿಜೆಪಿಯತ್ತ ಚಿತ್ತ ಹರಿಸಿರುವ ಕರ್ನಾಟಕದ ಡ್ಯಾಸಿಂಗ್ ,ಡೈನಾಮಿಕ್ ಲೀಡರ್ ಆಗಿರುವ ಕುಮಾರಸ್ವಾಮಿಯವರನ್ನು ಆಮಂತ್ರಿಸಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಇರಬಹುದೇ ? ಎಂಬ ಸಂಶಯಗಳು ಮೂಡಿವೆ..
    ಕಳೆದ ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತವಿದ್ದ ಸಮಯದಲ್ಲಿ ಆರ್‌.ವಿ.ದೇಶ್ ಪಾಂಡೆ ಅವರು ಆಗಮಿಸಿಲಿದ್ದರು.ಆದರೆ ಕೊನೆಯ ಕ್ಷಣದಲ್ಲಿ ಕಲ್ಲಡ್ಕಕ್ಕೆ ಬರುವುದು ಕೈ ತಪ್ಪಿ ಹೋಗಿತ್ತು.
    ಹಾಗಾಗಿ ಜೆ.ಡಿ.ಎಸ್.ನ ಮಾಸ್ ಲೀಡರ್ ಕುಮಾರ್ ಸ್ವಾಮಿ ಆಗಮನ ವಿಚಾರ ರಾಜಕೀಯವಾಗಿ ದೊಡ್ಡ ವಿಚಾರವಾದರೂ ಕಲ್ಲಡ್ಕದ ಭದ್ರಕೋಟೆಗೆ ಅದು ಸಾಮನ್ಯ ವಿಚಾರ ಎಂದು ಹೇಳಲಾಗುತ್ತಿದೆ.
    ಡಾ| ಭಟ್ ಅವರ ಸಂಪರ್ಕದಲ್ಲಿರುವ ವ್ಯಕ್ತಿಯಲ್ಲಿ ಬೋಜೆ ಗೌಡ ಅವರು ಒಬ್ಬರಾಗಿದ್ದು ಈ ಹಿಂದಿನ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಿದ್ದಾರೆ. ಈ ಬಾರಿ ಮತ್ತೆ ಕ್ರೀಡೋತ್ಸವ ಕಾರ್ಯಕ್ರಮ ಅತಿಥಿಯಾಗಿದ್ದಾರೆ.
    ಅಂತಿಮವಾಗಿ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿರುವ ಕುಮಾರ ಸ್ವಾಮಿ ಆಮಂತ್ರಣ ಮುಂದಿನ ದಿನಗಳಲ್ಲಿನ ಫಲಿತಾಂಶದ ಮೇಲೆ ನಿರ್ಧರಿಸಲ್ಪಡುತ್ತದೆ. ಯಾವುದೇ ಕಾರಣವಿಲ್ಲದೆ ಕುಮಾರ ಸ್ವಾಮಿ ಕಲ್ಲಡ್ಕ ಕ್ರೀಡೋತ್ಸವದಲ್ಲಿ ಭಾಗಿಯಾಗುವುದಲ್ಲ ಎಂಬ ಸಂದೇಹಗಳು ಉಂಟಾಗಿವೆ.

    Share Information
    Advertisement
    Click to comment

    You must be logged in to post a comment Login

    Leave a Reply