Connect with us

    DAKSHINA KANNADA

    ಎಂಡೋಸಲ್ಫಾನ್ ಸಂತ್ರಸ್ತನ ಅತ್ಯಾಚಾರವೆಸಗಿದ ಮುದುಕ…..!!

    ಪುತ್ತೂರು ಅಕ್ಟೋಬರ್ 16: ಎಂಡೋಸಲ್ಫಾನ್ ಸಂತ್ರಸ್ತ ಯುವಕನ ಮೇಲೆ 66 ವರ್ಷದ ಮುದುಕನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವರದಿಯಾಗಿದೆ.


    ಸಂತ್ರಸ್ತ ಸಂಜೆ 6 ಗಂಟೆ ವೇಳೆಗೆ ವಾಕಿಂಗ್ ಗೆ ತೆರಳಿದ್ದನು. ವಾಪಸ್ಸಾದಾಗ ವ್ಯಕ್ತಿಯ ಬಟ್ಟೆ ಮಣ್ಣಾಗಿರುವುದನ್ನು ಕಂಡ ತಂದೆ ಈ ಬಗ್ಗೆ ವಿಚಾರಿಸಿದ್ದಾರೆ. ತನಗೆ ಪರಿಚಯವಿರುವ ಮೊಹಮ್ಮದ್ ಹನೀಫ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆತ ಘಟನೆಯನ್ನು ವಿವರಿಸಿದ್ದಾನೆ.

    ಮುರ ರೈಲ್ವೆ ಕ್ರಾಸ್ ಬಳಿ ತೆರಳುತ್ತಿದ್ದಾಗ ಮೊಹಮ್ಮದ್ ಹನೀಫ್ ಸಂತ್ರಸ್ತನಿಗೆ ಕಬ್ಬು ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ ಹಾಗೂ ಪೊದೆಗೆ ಕರೆದೊಯ್ದಿದ್ದಾನೆ. ಈ ವೇಳೆ ಲೈಂಗಿಕ ಕ್ರಿಯೆಗೆ ಆತ ನಿರಾಕರಿಸಿದ್ದರಿಂದ ಮೊಹಮ್ಮದ್ ಹನೀಫ್ ಸಂತ್ರಸ್ತ ಯುವಕನಿಗೆ ಥಳಿಸಿ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆಯನ್ನು ಮನೆಯಲ್ಲಿ ತಿಳಿಸಿದರೆ ಹತ್ಯೆ ಮಾಡುವುದಾಗಿಯೂ ಹನೀಫ್ ಬೆದರಿಕೆ ಹಾಕಿದ್ದಾನೆ. ಹನೀಫ್ ವಿರುದ್ಧ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply