Connect with us

FILM

ಎಂಪುರಾನ್’ ಭರ್ಜರಿ ಕಲೆಕ್ಷನ್​​: ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ ಮಲಯಾಳಂ ಸಿನಿಮಾ

ಸೂಪರ್​ ಹಿಟ್​ ‘ಲೂಸಿಫರ್’ ಬಿಡುಗಡೆಯಾಗಿ 6 ವರ್ಷಗಳ ನಂತರ, ಸೀಕ್ವೆಲ್​ ‘ಎಲ್​​2: ಎಂಪುರಾನ್’ ಕಳೆದ ದಿನ, ಮಾರ್ಚ್ 27ರಂದು ತೆರೆಗಪ್ಪಳಿಸಿದೆ. ಸೌತ್ ಸೂಪರ್‌ ಸ್ಟಾರ್ ಮೋಹನ್ ಲಾಲ್ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ ಸಾರಥ್ಯದ ಈ ಚಿತ್ರ, ಇಡೀ ಮಲಯಾಳಂ ಚಿತ್ರರಂಗದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​​ ಆಗಿ ಬಿಡುಗಡೆಯಾಯಿತು.

ಆರಂಭಿಕವಾಗಿ ಚಿತ್ರ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ನಿರೀಕ್ಷಿಸಿದಂತೆ, ಎಂಪುರಾನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೇಕರ್ಸ್​​ ಹೇಳಿಕೊಂಡಂತೆ, ಮಲಯಾಳಂ ಚಿತ್ರರಂಗದಲ್ಲೇ ಈವರೆಗಿನ ಅತಿದೊಡ್ಡ ಓಪನಿಂಗ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.

ಎಂಪುರಾನ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಎಲ್​2: ಎಂಪುರಾನ್ ಭಾರತೀಯ ಮಾರುಕಟ್ಟೆಯಲ್ಲಿ, ಮೊದಲ ದಿನ 22 ಕೋಟಿ ರೂ. ಕಲೆಕ್ಷನ್​ ಮಾಡಿದೆ. ನಿರೀಕ್ಷೆಯಂತೆ, ಚಿತ್ರದ ಮಲಯಾಳಂ ಆವೃತ್ತಿ 19.45 ಕೋಟಿ ರೂಪಾಯಿಯೊಂದಿಗೆ ಗಳಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ. ತೆಲುಗು ಆವೃತ್ತಿಯಿಂದ 1.2 ಕೋಟಿ ರೂಪಾಯಿ ಬಂದರೆ, ತಮಿಳು, ಕನ್ನಡ ಮತ್ತು ಹಿಂದಿ ಆವೃತ್ತಿಗಳು ಕ್ರಮವಾಗಿ ಸುಮಾರು 80 ಲಕ್ಷ ರೂ., 5 ಲಕ್ಷ ರೂ., ಮತ್ತು 50 ಲಕ್ಷ ರೂಪಾಯಿಯ ವ್ಯವಹಾರ ನಡೆಸಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *