Connect with us

    LATEST NEWS

    ಮೊಬೈಲ್‌ನಲ್ಲಿ ಯುವತಿಯ ಚಿತ್ರ ಸೆರೆ ಹಿಡಿಯಲೆತ್ನಿಸಿದ ನೌಕರನ ಬಂಧನ – ಪೋಕ್ಸೋ ಕೇಸು ದಾಖಲು

    ಕುಂಬಳೆ, ಜುಲೈ 25: ಸ್ಪೋರ್ಟ್ಸ್ ಬಟ್ಟೆ ಖರೀಸಿ ಅಳತೆ ಅಂದಾಜಿಸಲು ಟ್ರೈಯಲ್ ರೂನ್‌ಗೆ ತೆರೆಳಿದ ಯುವತಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ಸೆರೆ ಹಿಡಿಯಲು ಯತ್ನಿಸಿದ ಅಂಗಡಿ ನೌಕರನೊಬ್ಬನನ್ನು ಕುಂಬಳೆ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿರುವ ಘಟನೆ ನಡೆದಿದೆ.

    ಬಂಧಿತ ಆರೋಪಿಯನ್ನು ಆಸಿಫ್ (24) ಎಂದು ಗುರುತಿಸಲಾಗಿದೆ. ಬಟ್ಟೆ ಖರೀಸಿಸಲು ಯುವತಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಸ್ಪೋರ್ಟ್ಸ್ ಡ್ರೆಸ್ ಅಂಗಡಿಗೆ ಬಂದಿದ್ದು, ಈ ವೇಳೆ ಡ್ರೆಸ್ ಅಳತೆ ನೋಡಿ ಕೊಂಡು ಬನ್ನಿ ಎಂದು ಟ್ರೈಯಲ್ ರೂಮ್‌ಗೆ ನೌಕರ ಕಳುಹಿಸಿದ್ದಾನೆ.

    ಈ ವೇಳೆ ತನ್ನ ಮೊಬೈಲ್ ಇರಿಸಿ ಯುವತಿ ಡ್ರೆಸ್ ಬದಲಾಯಿಸುವ ದೃಶ್ಯವನ್ನು ಸೆರೆ ಹಿಡಿಯಲು ಯತ್ನಿಸಿದ್ದಾನೆ. ಆದರೆ ಇದನ್ನು ಗಮನಿಸಿ ಯುವತಿ ಈ ಬಗ್ಗೆ ಪ್ರಶ್ನಿಸಿ ಆರೋಪಿ ವಿರುದ್ದ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply