LATEST NEWS
ಮುಂಬೈ ಕಾಲ್ತುಳಿತ ;ಮೃತರಲ್ಲಿ ಇಬ್ಬರು ಮಂಗಳೂರಿಗರು

ಮುಂಬೈ ಕಾಲ್ತುಳಿತ ;ಮೃತರಲ್ಲಿ ಇಬ್ಬರು ಮಂಗಳೂರಿಗರು
ಮಂಗಳೂರು,ಸೆಪ್ಟೆಂಬರ್ 29 : ಮುಂಬೈನ ಪರೇಲ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ ಮಂಗಳೂರಿನ ಇಬ್ಬರು ಮೃತಪಟ್ಟಿದ್ದಾರೆ . ಮೃತಪಟ್ಟವರನ್ನು ಸುಜಾತಾ ಪಿ. ಆಳ್ವ ಹಾಗೂ ಸುಮಲತಾ ಸಿ. ಶೆಟ್ಟಿ ಎಂದು ಗುರುತಿಸಲಾಗಿದೆ .
ಸುಜಾತಾ ಪಿ ಆಳ್ವಾ ಮತ್ತು ಸುಮಲತಾ ಸಿ ಶೆಟ್ಟಿ ಮುಂಬಯಿ ಬಂಟ್ಸ್ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿಯ ಸಕ್ರಿಯ ಸದಸ್ಯರು ಎಂದು ಹೇಳಲಾಗಿದೆ.ಇಬ್ಬರು ಕಾಂಜೂರ್ ಮಾರ್ಗ ಪೂರ್ವ ನೆಹರು ನಗರ ನಿವಾಸಿಗಳಾಗಿದ್ದು ದಸರಾ ಹಬ್ಬದ ಪ್ರಯುಕ್ತ ಹೂ ಖರೀದಿಸಲೆಂದು ಹೋದವರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮೃತಪಟ್ಟ ಸುಮಲತಾ ಶೆಟ್ಟಿ ಮಂಗಳೂರು ಹೊರವಲಯದ ಸುರತ್ಕಲ್ ನ ಇನ್ನಾ ಮೂಲದವರಾಗಿದ್ದಾರೆ . ಸುಜಾತಾ ಆಳ್ವಾ ವಾಮಂಜೂರು ಮೂಲದವರೆಂದು ಹೇಳಲಾಗಿದ್ದು ಅತ್ಯುತ್ತಮ ರಂಗಕರ್ಮಿ ಆಗಿದ್ದರು.