DAKSHINA KANNADA
ಕಾಲು ಮುರಿದುಕೊಂಡು ಯಾತನೆ ಪಡುತ್ತಿರುವ ಆನೆ – ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯಿಂದ ವಿಳಂಬ ನೀತಿ

ಕಾಲು ಮುರಿದುಕೊಂಡು ಯಾತನೆ ಪಡುತ್ತಿರುವ ಆನೆ – ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯಿಂದ ವಿಳಂಬ ನೀತಿ
ಪುತ್ತೂರು ಮೇ 9: ಸುಬ್ರಹ್ಮಣ್ಯ ಅರಣ್ಯ ವಲಯದ ಬಾಳುಗೋಡು ಮೀಸಲು ಅರಣ್ಯ ವ್ಯಾಪ್ತಿಯ ಮಿತ್ತಡ್ಕ ಎಂಬಲ್ಲಿ ಕಾಲಿಗೆ ಗಾಯಗೊಂಡ ಆನೆಯೊಂದು ಪತ್ತೆಯಾಗಿದ್ದು, ವನ್ಯಜೀವಿ ಇಲಾಖಾ ಅಧಿಕಾರಿಗಳು ಇಂದು ಆನೆಯಿರುವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಆದರೆ ಆನೆಯನ್ನು ದೂರದಿಂದಲೇ ಪರಿಶೀಲಿಸಿದ ಅರಣ್ಯ ಅಧಿಕಾರಿಗಳು ಆನೆಗೆ ಯಾವುದೇ ರೀತಿಯ ಉಪಚಾರ ಮಾಡಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

ಕಳೆದ ನಾಲ್ಕು ದಿನಗಳಿಂದ ನೀರು-ಆಹಾರವಿಲ್ಲದೆ, ನಡೆಯಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಈ ಆನೆಗೆ ಅರಣ್ಯ ಇಲಾಖೆ ಆಹಾರ ಪೂರೈಕೆಯ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಆನೆಯ ಉಪಚಾರದ ದೃಷ್ಟಿಯಲ್ಲಿ ಅರಣ್ಯ ಇಲಾಖೆಯು ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪವನ್ನೂ ಮಾಡಲಾಂಭಿಸಿದ್ದಾರೆ.