ಪೊಲೀಸರ ಮೇಲೆ ಹಲ್ಲೆಗೆ ಯತ್ನ, ನಟೋರಿಯಸ್ ರೌಡಿ ಕಾಲಿಗೆ ಗುಂಡೇಟು

ಮಂಗಳೂರು ಮೇ 10: ಬಂಧಿಸಲು ತೆರಳಿದ ಪೊಲೀಸರ ಮೇಲೆ ನಟೋರಿಯಸ್ ರೌಡಿಯೊಬ್ಬ ಹಲ್ಲೆಗೆ ಮುಂದಾದ ಘಟನೆ ತಡರಾತ್ರಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದಿದೆ.

ಗೌರೀಶ್ ಹಲ್ಲೆಗೆ ಮುಂದಾದ ನಟೋರಿಯಸ್ ರೌಡಿ ಎಂದು ಗುರುತಿಸಲಾಗಿದ್ದು, ಗೌರೀಶ್ ಮಂಗಳೂರಿನ ನಟೋರಿಯಸ್ ರೌಡಿ ಆಗಿದ್ದು, ಗೌರೀಶ್ 3 ಮರ್ಡರ್ ಸೇರಿದಂತೆ 6 ಪ್ರಕರಣದಲ್ಲಿ ಭಾಗಿಯಾಗಿದ್ದ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಗೌರಿಶ್ ನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು.

ಗಡಿಪಾರು ಮಾಡಿದ್ದರೂ ಜಿಲ್ಲೆಯಲ್ಲಿ ತಿರುಗಾಡಿಗೊಂಡಿರುವ ಮಾಹಿತಿ ಹಿನ್ನಲೆಯಲ್ಲಿ ಆತನನ್ನು ಬಂಧಿಸಲು ಪೊಲೀಸರು ಖೆಡ್ಡಾ ತೋಡಿದ್ದರು. ಬಂಧನದ ವೇಳೆ ಗೌರೀಶ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪೊಲೀಸ್ ಹಾಗೂ ಗೌರೀಶ್ ಘರ್ಷಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಶೀನಪ್ಪ ಎಂಬವರಿಗೆ ಗಾಯವಾಗಿದೆ. ಶೀನಪ್ಪ ಅವರಿಗೆ ಗಾಯವಾಗಿದ್ದು, ನೋಡಿ ಪೊಲೀಸರು ತಮ್ಮ ಜೀವರಕ್ಷಣೆಗೆ ಗೌರೀಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗೌರೀಶ್ 3 ಮರ್ಡರ್ ಸೇರಿದಂತೆ 6 ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೆ ಆತ ಜನರಿಂದ ಹಫ್ತಾ ವಸೂಲಿ ಪಡೆಯುತ್ತಿದ್ದ ಬಗ್ಗೆ ದೂರು ಕೇಳಿ ಬಂದಿತ್ತು. ಸದ್ಯ ಗಾಯಾಳು ಪೊಲೀಸ್ ಮತ್ತು ರೌಡಿ ಗೌರೀಶ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.