Connect with us

DAKSHINA KANNADA

ಮೂತ್ರ ವಿಸರ್ಜನೆಗೆ ಹೋಗಿದ್ದ ಲಾರಿ ಚಾಲಕನ್ನು ತುಳಿದು ಸಾಯಿಸಿದ ಕಾಡಾನೆ

ಪುತ್ತೂರು ಫೆಬ್ರವರಿ 26: ಮೂತ್ರ ವಿಸರ್ಜನೆಗೆಂದು ತೆರಳಿದ್ದ ಲಾರಿ ಚಾಲಕನ್ನು ಕಾಡಾನೆಯೊಂದು ತುಳಿದು ಸಾಹಿಸಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಶಿರಾಡಿ ಘಾಟ್‍ನ ಕೆಂಪುಹೊಳೆ ಸಮೀಪ ನಡೆದಿದೆ.


ಮೃತ ರಾಜಸ್ತಾನ ಮೂಲದ ಲಾರಿ ಚಾಲಕ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಕೆಂಪುಹೊಳೆ ಸಮೀಪ ಲಾರಿ ನಿಲ್ಲಿಸಿ ಮೂತ್ರವಿಸರ್ಜನೆಗೆಂದು ಹೋಗಿದ್ದ ವೇಳೆ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಆನೆ ದಾಳಿಯಿಂದಾಗಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು , ಮೃತದೇಹವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೆಂಪುಹೊಳೆ ಪ್ರದೇಶದಲ್ಲಿ ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ್ದು , ಇದರಿಂದಾಗಿ ವಾಹನ ಸಂಚಾರದಲ್ಲೂ ಅಡಚಣೆ ಉಂಟಾಗಿದ್ದು ವಾಹನ ಸವಾರರು ಭಯಭೀತರಾಗಿ ಸಂಚರಿಸುವ ಪರಿಸ್ಥಿತಿ ಬಂದಿದೆ.