Connect with us

DAKSHINA KANNADA

ಕುಲ್ಕುಂದ ಕಾಡಾನೆ ದಾಳಿಗೆ ಅಪಾರ ಕೃಷಿ ನಾಶ

ಕುಲ್ಕುಂದ ಕಾಡಾನೆ ದಾಳಿಗೆ ಅಪಾರ ಕೃಷಿ ನಾಶ

ಸುಬ್ರಹ್ಮಣ್ಯ ಜನವರಿ 6: ಕಾಡಾನೆಗಳ ಹಿಂಡೊಂದು ಕೃಷಿ ಭೂಮಿಗೆ ನುಗ್ಗಿ ಅಪಾರ‌ ಕೃಷಿ ಹಾನಿ ಮಾಡಿದೆ. ಸುಬ್ರಹ್ಮಣ್ಯ ದ ಕುಲ್ಕುಂದ ಬಳಿಯಿರುವ ಅಡಿಕೆ ತೋಟಕ್ಕೆ ನುಗ್ಗಿದ ಈ ಹಿಂಡು ಸುಮಾರು 700 ಕ್ಕೂ ಮಿಕ್ಕಿದ ಅಡಿಕೆ ಮರಗಳನ್ನು ತಿಂದು ಹಾಕಿದೆ.

ಇಂದು ಮುಂಜಾನೆ ಹಠಾತ್ ತೋಟಕ್ಕೆ ದಾಳಿ ಮಾಡಿದ ಆನೆಗಳ ಹಿಂಡು ಇದೀಗ ಕುಲ್ಕುಂದದ ಕಾಡಿನಲ್ಲೇ ಬೀಡು ಬಿಟ್ಟಿದೆ. ಈ ಕಾಡಾನೆಗಳ ಹಿಂಡಿನಲ್ಲಿ ಮೂರ್ನಾಲ್ಕು ಆನೆಗಳಿರುವುದನ್ನು ಸ್ಥಳೀಯರು ಪತ್ತೆಹಚ್ಚಿದ್ದು, ಹಿಂಡಿನಲ್ಲಿ ಮರಿಯಾನೆಯೂ ಇದೆ ಎಂದು ಗುರುತು ಹಚ್ಚಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.