Connect with us

    LATEST NEWS

    ಉಡುಪಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.63 ಲಕ್ಷ ರೂಪಾಯಿ ನಗದು ವಶ

    ಉಡುಪಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.63 ಲಕ್ಷ ರೂಪಾಯಿ ನಗದು ವಶ

    ಉಡುಪಿ ಎಪ್ರಿಲ್ 12: ದಾಖಲೆಯಿಲ್ಲದೆ ಸಾಗಿಸುತ್ತಿದ್ದ‌ ಒಟ್ಟು 1.63 ಲಕ್ಷ ರೂಪಾಯಿ‌ ನಗದನ್ನು‌ ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಾಪುರದ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಹಾಗೂ  ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರು ಚೆಕ್‌ಪೋಸ್ಟ್‌ನಲ್ಲಿ ನಗದನ್ನು ವಶಕ್ಕೆ ಪಡೆಯಲಾಗಿದೆ.

    ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ  ವಾಹನ ತಪಾಸಣೆ ನಡೆಸುತ್ತಿದ್ದಾಗ ಯಡಮೊಗ್ಗೆಯ ವಿಶ್ವನಾಥ್ ನಾಯಕ್ ಎಂಬವರ ಪಿಕ್ ಅಪ್ ವಾಹನದಲ್ಲಿ ಯಾವುದೇ ದಾಖಲೆಗಳಿದ್ದ 1,05,790ರೂ. ನಗದು ಪತ್ತೆಯಾಗಿದೆ.ವಿಶ್ವನಾಥ್ ನಾಯಕ್ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದ ಹಣವನ್ನು ಸಂಗ್ರಹಿಸಿ ತನ್ನ ಮಾಲಕರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ.

    ಅದೇ ರೀತಿ  ಅಂಜಾರು ಚೆಕ್‌ಪೊಸ್ಟ್‌ನಲ್ಲಿ ಮುರ್ಡೆಶ್ವರದ ಗಜೇಂದ್ರ ಶೆಟ್ಟಿ ಎಂಬವರ ಕಾರಿನಲ್ಲಿ  ಯಾವುದೇ ದಾಖಲೆಗಳಿಲ್ಲದ 58,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಬಟ್ಟೆ ಖರೀದಿಸಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ.

    ಇದೀಗ ಈ ಹಣವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಸಿಇಒ ನೇತೃತ್ವದ ಜಿಲ್ಲಾ ಮಟ್ಟದ ಚುನಾವಣಾ ಸಮಿತಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸಂಬಂಧಪಟ್ಟವರು ಈ ನಗದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ವಶಪಡಿಸಿಕೊಂಡಿರುವ ಹಣವನ್ನು ಹಿಂದಿರುಗಿಸಲಾಗುವುದು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply