LATEST NEWS
ವೋಟರ್ ಸ್ಲಿಪ್ ನ್ನು ಮನೆ ಮನೆಗೆ ಮುಟ್ಟಿಸಲು ಚುನಾವಣಾ ಆಯೋಗ ವಿಫಲ- ಯು.ಟಿ ಖಾದರ್

ವೋಟರ್ ಸ್ಲಿಪ್ ನ್ನು ಮನೆ ಮನೆಗೆ ಮುಟ್ಟಿಸಲು ಚುನಾವಣಾ ಆಯೋಗ ವಿಫಲ- ಯು.ಟಿ ಖಾದರ್
ಮಂಗಳೂರು ಮೇ 14: ರಾಜ್ಯ ಚುನಾವಣಾ ಆಯೋಗದ ವಿರುದ್ದ ಸಚಿವ ಯು,ಟಿ ಖಾದರ್ ಕಿಡಿಕಾರಿದ್ದಾರೆ. ವೋಟರ್ ಸ್ಲಿಪ್ ನ್ನು ಮನೆಮನೆಗೆ ಮುಟ್ಟಿಸಲು ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು, ಅದರೆ ಕೆಲವು ವಿಚಾರದಲ್ಲಿ ವೈಫಲ್ಯ ಕಂಡಿದೆ ಎಂದು ದೂರಿದರು. ಆಯೋಗ ನೀಡಿದ ವೋಟರ್ ಸ್ಲಿಪ್ ನಲ್ಲಿ ದುರುಪಯೋಗ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು ಮತದಾನದ ವೇಳೆ ಕೇವಲ ವೋಟರ್ ಸ್ಲಿಪ್ ತೋರಿಸಿ ಮತ ಹಾಕುವ ವ್ಯವಸ್ಥೆ ಮಾಡಲಾಗಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಮತದಾನದ ಸಂದರ್ಭದಲ್ಲಿ ಚುನಾವಣಾ ಆಯೋಗ ಗುರುತಿನ ಚೀಟಿಯು ಅಗತ್ಯವಿರಲಿಲ್ಲ. ವೋಟರ್ ಸ್ಲಿಪ್ ನಲ್ಲಿ ಕಪ್ಪು- ಬಿಳುಪು ಭಾವಚಿತ್ರ ಇರುತ್ತೆ. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯ. ಇದರಿಂದ ದುರುಪಯೋಗ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲವು ಕಡೆ ರಾಜಕೀಯ ಪ್ರಭಾವಿಗಳಿಗೆ ವೋಟರ್ ಸ್ಲಿಪ್ ಕೊಡಲಾಗಿದೆ. ಇದರಿಂದ ಮುಂದೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಅವರು ಹೇಳಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವು ಖಚಿತ ಎಂದು ಸಚಿವ ಯು.ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಅವರು ಹೇಳಿದರು.