Connect with us

DAKSHINA KANNADA

ನಿಡಸೋಸಿ ಮಠಕ್ಕೆ ಏಕಗಮ್ಯಾನಂದ ಸ್ವಾಮೀಜಿ ಉತ್ತರಾಧಿಕಾರಿ

ಮಂಗಳೂರು, ಮಾರ್ಚ್ 02: ಮಂಗಳೂರಿನ ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ ಅವರು ಬೆಳಗಾವಿ ಜಿಲ್ಲೆ ನಿಡಸೋಸಿಯ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ 10ನೇ ಪೀಠಾಧಿಪತಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ನಿಡಸೋಸಿಯಲ್ಲಿ ಮಾ.2ರಂದು ಬೆಳಿಗ್ಗೆ 11 ಗಂಟೆಗೆ ಪುರಪ್ರವೇಶ, ಉತ್ತರಾಧಿಕಾರಿ ಸ್ವಾಗತ ಸಮಾರಂಭ ನಡೆಯಲಿದೆ ಎಂದು ಏಕಗಮ್ಯಾನಂದ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಫೆ.12ರಂದು ಮಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ಉತ್ತರ ಕರ್ನಾಟಕದ ಮಠವೊಂದಕ್ಕೆ ಉತ್ತರಾಧಿಕಾರಿಯಾಗಿ ಹೋಗುವುದಾಗಿ ಸ್ವಾಮೀಜಿ ಹೇಳಿದ್ದರು. ಆದರೆ, ಮಠದ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ಮಂಗಳೂರಿನ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್‌ನ ಮಾರ್ಗದರ್ಶಕರಾಗಿದ್ದ ಸ್ವಾಮೀಜಿ, ಸ್ವಚ್ಛ ಮಂಗಳೂರು ಅಭಿಯಾನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement
Click to comment

You must be logged in to post a comment Login

Leave a Reply