WORLD
ವಿಶ್ವ ಪ್ರಸಿದ್ಧ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ…

ವಿಶ್ವ ಪ್ರಸಿದ್ಧ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ…
ಪ್ಯಾರೀಸ್, ಸೆಪ್ಟಂಬರ್ 23: ಫ್ರಾನ್ಸ್ ನ ವಿಶ್ವ ಪ್ರಸಿದ್ಧ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಈ ಪ್ರೇಕ್ಷಣೀಯ ಸ್ಥಳವನ್ನು ಸದ್ಯಕ್ಕೆ ಮುಚ್ಚಲಾಗಿದೆ.

Image of Paris at sunrise with the Eiffel Tower.
ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಈ ಐಫೆಲ್ ಟವರ್ ನೋಡಲು ಫ್ರಾನ್ಸ್ ಗೆ ಬರುತ್ತಿದ್ದು, ಕೊರೊನಾ ವೈರಸ್ ಮಹಾಮಾರಿಯ ನಡುವೆಯೂ ಇಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮಾತ್ರ ಕೊರತೆ ಕಂಡು ಬಂದಿಲ್ಲ.

ಆದರೆ ಇಂದು ವ್ಯಕ್ತಿಯೋರ್ವ ಪೋಲೀಸರಿಗೆ ಫೋನ್ ಮಾಡಿ ಐಫೆಲ್ ಟವರ್ ಗೆ ಬಾಂಬ್ ಇಟ್ಟು ಉಡಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾನೆ.
ಅಲ್ಲದೆ ಬಾಂಬ್ ಈಗಾಗಲೇ ಇಡಲಾಗಿದೆ ಎಂದೂ ಹೇಳಿದ್ದು, ಪೋಲೀಸರು ಇದೀಗ ಐಫೆಲ್ ಟವರ್ ಸುತ್ತಮುತ್ತ ಭಾರೀ ಭದ್ರತೆ ಏರ್ಪಡಿಸಿದ್ದಾರೆ.
ಅಲ್ಲದೆ ಜನರ ಭೇಟಿಗೆ ಅವಕಾಶವನ್ನೂ ನಿರಾಕರಿಸಿದ್ದಾರೆ.
ಬಾಂಬ್ ಹಿನ್ನಲೆಯಲ್ಲಿ ಪೋಲೀಸರು ಇದೀಗ ಪರಿಸರದಾದ್ಯಂತ ಬಾಂಬ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಫ್ರಾನ್ಸ್ ನ ಸ್ಥಳೀಯ ಪತ್ರಿಕೆಯೊಂದರ ಪ್ರಕಾರ ವ್ಯಕ್ತಿಯೋರ್ವ ಐಫೆಲ್ ಟವರ್ ಬಳಿ ಬಂದು ಅಲ್ಲಾಹು ಅಕ್ಬರ್ ಎಂದು ಫೋಷಣೆ ಕೂಗಿದ್ದಾನೆ.
ಅಲ್ಲದೆ ಟವರ್ ಗೆ ಬಾಂಬ್ ಇಡಲಾಗಿದೆ ಎಂದು ಜೋರಾಗಿ ಕೂಗಿದ್ದಾನೆ ಎಂದಿದೆ.
ಆದರೆ ಪೋಲೀಸರು ಈ ವಿಚಾರವನ್ನು ಪುಷ್ಠಿ ಪಡಿಸಿಲ್ಲವಾದರೂ, ಬಾಂಬ್ ಬೆದರಿಕೆ ಬಂದಿರುವುದನ್ನು ಸ್ಪಷ್ಟಪಡಿಸಿದ್ದಾರೆ.