ಪುತ್ತೂರು ಅಗಸ್ಟ್ 24: ಹೌದು ಇಂಥದೊಂದು ಸ್ವಾರಸ್ಯಕರ ಘಟನೆ ನಡೆದದ್ದು ಪುತ್ತೂರಿನ ತೆಂಕಿಲ ಎಂಬಲ್ಲಿ. ತೆಂಕಿಲದ ಮನೆಯೊಡತಿಯೊಬ್ಬಳು ತನ್ನ ಹೇಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಈಕೆ ಗೂಡಿನೊಳಗೆ ನುಗ್ಗಿ ಹೇಂಟೆ ಕೋಳಿಯನ್ನು ತೆಗೆಯಲು ಪ್ರಯತ್ನಿಸುತ್ತಾರೆ.

ಆ ಸಂದರ್ಭದಲ್ಲಿ ಮಹಿಳೆಯು ಗೂಡಿನೊಳಗೆ ತಲೆ ಹಾಕಿದ್ದನ್ನು ಗಮನಿಸಿ ಹುಂಜ ಕೋಳಿಯೊಂದು ಮಹಿಳೆಯ ಬೆಂಡೋಲೆಯನ್ನೇ ಕುಕ್ಕಿ ತಿಂದಿದೆ.

ಕಿವಿ ನೋವಿನಿಂದ ಕಿರುಚಿದ ಮಹಿಳೆಯ ಧ್ವನಿ ಕೇಳಿ ಮನೆಯವರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸುಮಾರು ಏಳೆಂಟು ಕಿಲೋ ತೂಕದ ಹುಂಜದ ಹೊಟ್ಟೆಯಿಂದ ಚಿನ್ನದ ಬೆಂಡೋಲೆಯನ್ನು ಹೇಗೆ ತೆಗೆಯುವುದು ಎಂದು ಚಿಂತೆಯಲ್ಲಿದ್ದ ಮನೆಮಂದಿಗೆ ಕೊನೆಗೆ ಹೊಳೆದದ್ದು ಹುಂಜನನ್ನು ಮಟಾಶ್ ಮಾಡುವ ಐಡಿಯಾ.

ತಡ ಮಾಡದ ಮನೆಮಂದಿ ಸೇರಿ ಹುಂಜನನ್ನು ಕಬಾಬ್ ಮಾಡಿದ್ದಲ್ಲದೆ, ಚಿನ್ನದ ಬೆಂಡೋಲೆ ಮತ್ತೆ ಮಹಿಳೆಯ ಕಿವಿ ಸೇರುವ ಮೂಲಕ ಬೆಂಡೋಲೆ ಕೋಳಿ ನುಂಗಿತ್ತಾ ಪ್ರಕರಣ ಸುಖಾಂತ್ಯಗೊಂಡಿದೆ.
ಈ ವಿಚಾರವನ್ನು ಮನೆಯಾತ ಬೇರೊಬ್ಬರಲ್ಲಿ ಹಂಚಿಕೊಂಡ ಸಂದರ್ಭದಲ್ಲಿ ಈ ವಿಚಾರ ದಿ ಮ್ಯಾಂಗಲೂರ್ ಮಿರರ್ ಕಿವಿಗೆ ಬಿದ್ದಿದೆ.