ಮಂಗಳೂರು, ಅಗಸ್ಟ್ 27: ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವನ್ನು ಜನಪ್ರತಿನಿಧಿಗಳ ಬದಲು ಸಂವಿಧಾನೇತರ ಶಕ್ತಿಗಳು ಆಳುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಆಮೀನ್ ಮಟ್ಟು ಆರೋಪಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ನಡೆದ ಡಿವೈಎಫ್ ಐ ಮಂಗಳೂರು ನಗರ 11 ನೇ ಸಮ್ಮೇಳನ ” ಅರಿವು, ಸೌಹಾರ್ದ. ಮುನ್ನಡೆಗಾಗಿ : ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೂ ಧರ್ಮ ಉಳಿದಿರುವುದು ಪೇಜಾವರ ಶ್ರೀ, ಪ್ರಭಾಕರ ಭಟ್ ಅಥವಾ ಮೋಹನ್ ಭಾಗವತ್ ಅವರಿಂದ ಅಲ್ಲ. ಹಿಂದೂ ಧರ್ಮ ಉಳಿದಿರುವುದು ಸ್ವಾಮಿ ವಿವೇಕಾನಂದ, ನಾರಾಯಣ ಗುರು ಅಂತಹ ಗುರುಗಳಿಂದ ಎಂದು ಅವರು ಹೇಳಿದರು. ಆರ್ ಎಸ್ ಎಸ್ ವರಿಷ್ಟ ಮೋಹನ್ ಭಾಗವತ್, ಪೇಜಾವರ ಸ್ವಾಮೀಗಳು, ಕಲ್ಲಡ್ಕ ಪ್ರಭಾಕರ ಭಟ್ ಅವರುಗಳು ಹಿಂದೂ ಧರ್ಮದ ಸುಧಾರಕರಾಗಿದ್ದಲ್ಲಿ ಅಸ್ಪೃಶತೆ, ಮೂಡನಂಬಿಕೆಗಳ ಬಗ್ಗೆ ಯಾಕೆ ಚಕಾರವೆತ್ತುತ್ತಿಲ್ಲ ಎಂದ ಮಟ್ಟು ದೇವರು, ಧರ್ಮದ ಹೆಸರಿನಲ್ಲಿ ಬಡ ಮುಗ್ದ ಜನರನ್ನು ಶೋಷಣೆಮಾಡುವವರು ಹಿಂದೂ ಧರ್ಮದ ಒಳಗಿರುವ ಶತ್ರುಗಳು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆದ ಗಲಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಜಾತಿಗೆ ಸೇರಿದ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂದು ಸವಾಲು ಹಾಕಿದ ಅವರು ಕೋಮು ಶಕ್ತಿಗಳು ದೇಶವನ್ನು ಆಳುತ್ತಿರುವುದು ದೇಶದ ದುರಂತ ಎಂದರು. ಉದಾರೀಕರಣ, ಕೋಮುವಾದ ದೇಶದ ಎರಡು ದೊಡ್ಡ ದುರಂತ, ಇದಕ್ಕೆ ಉತ್ತರ ಕಂಡುಕೊಳ್ಳಬೇಕಾಗ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

Facebook Comments

comments