LATEST NEWS
ಪಂಜಿಮೊಗರು ಸರಕಾರಿ ಶಾಲೆಯ ಆವರಣಗೋಡೆ ಕೆಡವಿಹಾಕಿರುವ ಕಾರ್ಪೊರೇಟರ್ ವಿರುದ್ಧ DYFI ಆಕ್ರೋಶ…

ಮಂಗಳೂರು ಮಾರ್ಚ್ 18: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಮಂಗಳೂರು ಉತ್ತರ ಇಲ್ಲಿನ ಆವರಣಗೋಡೆ ನಿರ್ಮಾಣಕ್ಕೆ pwd ಇಲಾಖೆಯಿಂದ ಅನುದಾನ ಮಂಜೂರು ಆಗಿರುತ್ತದೆ. ಶಿಥಿಲಗೊಂಡಿದ್ದ ಹಳೆಯ ಆವರಣಗೋಡೆಯನ್ನು ಕೆಡವಿ ಹೊಸ ಗೋಡೆ ನಿರ್ಮಾಣ ಆರಂಭಿಸುವಾಗ ಸ್ಥಳೀಯ ಕಾರ್ಪೊರೇಟರ್ ಅನಿಲ್‌ಕುಮಾರ್ ಕಾಮಗಾರಿಗೆ ತಡೆಯೊಡ್ಡಿ ಅಕ್ರಮವಾಗಿ ಶಾಲೆಯ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿರುತ್ತಾರೆ. ಆದರೆ ರಸ್ತೆ ಅಗಲೀಕರಣದ ಕುರಿತು ಶಾಲೆಯ ಹಾಗೂ ಶಿಕ್ಷಣ ಇಲಾಖೆಯ ಯಾವುದೇ ಅನುಮತಿ ಪಡೆಯದ ಕಾರಣ ಶಾಲೆಯ ಜಾಗವನ್ನು ಅತಿಕ್ರಮಣ ಮಾಡದಂತೆ ಶಾಲಾ ಮಂಡಳಿ ಆದೇಶಿಸಿರುತ್ತದೆ. ಆದರೂ ಕಾರ್ಪೊರೇಟರ್ ಶಾಲೆಯ ತಡೆಗೋಡೆ ನಿರ್ಮಿಸಲು ತಡೆಯೊಡ್ಡುತ್ತಿದ್ದು ಹಲವು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ. ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ಶಾಲೆಗೆ ತಡೆಗೋಡೆ ಇಲ್ಲದಿರುವುದರಿಂದ ಮಕ್ಕಳಿಗೆ ಹಾಗೂ ಶಾಲೆಯ ಸೊತ್ತುಗಳಿಗೆ ರಕ್ಷಣೆ ಇಲ್ಲದಾಗಿದೆ.
ಸರಕಾರಿ ಶಾಲೆಯ ಸ್ವಂತ ಜಾಗದಲ್ಲಿ ಇರುವ ಆವರಣಗೋಡೆಗೂ ನಗರಪಾಲಿಕೆಗೂ ಯಾವುದೇ ಸಂಭಂದ ಇರುವುದಿಲ್ಲ. ರಸ್ತೆ ಆಗಲೀಕರಣದ ಯಾವುದೇ ಪ್ರಸ್ತಾವನೆಯೂ ಪಾಲಿಕೆಯಲ್ಲಿ ಈವರೆಗೆ ಮಾಡಿರುವ ದಾಖಲೆಗಳಿಲ್ಲ ಆದರೂ ಸ್ಥಳೀಯ ಕಾರ್ಪೊರೇಟರ್ ಕಾಮಗಾರಿಗೆ ತಡೆಯೊಡ್ಡುತ್ತಿದ್ದಾರೆ.

ಯಾವುದೇ ಲಿಖಿತ ವ್ಯವಹಾರಗಳಿಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿಯನ್ನು ಅಕ್ರಮವಾಗಿ ತಡೆಹಿಡಿದಿರುವುದು ಅಕ್ಷಮ್ಯ ಅಪರಾಧ ಹಾಗೂ ಸರಕಾರಿ ಶಾಲೆಗೆ ಕಾರ್ಪೊರೇಟರ್ ಅನ್ಯಾಯ ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣ ಸಂಧರ್ಭ ನ್ಯಾಯಯುತವಾಗಿ ಶಿಕ್ಷಣ ಇಲಾಖೆ ಅನುನತಿ ಮೂಲಕ ಹಾಗೂ ನಗರ ಪಾಲಿಕೆ ಕಾಮಗಾರಿ ಮಂಜೂರಾದ ನಂತರ ನಡೆಯುವ ಕಾಮಗಾರಿಯನ್ನು DYFI ಬೆಂಬಲಿಸುತ್ತದೆ ಆದರೆ ಈ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯವಕಾಶ ಬೇಕಾಗಿರುವುದರಿಂದ ಮಕ್ಕಳ ಹಾಗೂ ಶಾಲೆಯ ಹಿತದೃಷ್ಟಿಯಿಂದ ಈಗ ನಿಲ್ಲಿಸಿರುವ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ತಪ್ಪಿದ್ದಲ್ಲಿ ಕಾರ್ಪೊರೇಟರ್ ಹಾಗೂ ಗುತ್ತಿಗೆದಾರರ ವಿರುದ್ಧ ಹಂತಹಂತವಾದ ಪ್ರತಿಭಟನೆಯನ್ನು dyfi ಸಂಘಟನೆ ನಡೆಸುತ್ತದೆ ಎಂದು ಪಂಜಿಮೊಗರು ಘಟಕದ ಅಧ್ಯಕ್ಷ ಚರಣ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಡಿ’ಸೋಜ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.