BANTWAL
ಬಂಟ್ವಾಳದಲ್ಲಿ ಮತ್ತೆ ಮರುಕಳಿಸಿದ ಸುಳ್ಯದ ಎಡವಟ್ಟು, ಮೋದಿಗೆ ನಾಚಿಗೆಯಾಗಬೇಕು ಎಂದ ಡಿವಿ

ಬಂಟ್ವಾಳದಲ್ಲಿ ಮತ್ತೆ ಮರುಕಳಿಸಿದ ಸುಳ್ಯದ ಎಡವಟ್ಟು, ಮೋದಿಗೆ ನಾಚಿಗೆಯಾಗಬೇಕು ಎಂದ ಡಿವಿ
ಬಂಟ್ವಾಳ, ನವಂಬರ್ 11: ಮಾತನಾಡುವ ಅವೇಶದಲ್ಲಿ ಪ್ರಧಾನಿ ಮೋದಿಯವರನ್ನು ಬಾಯಿತಪ್ಪಿ ನಾಚಿಗೆಯಿಲ್ಲಿದವರು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಜರಿದಿದ್ದಾರೆ. ಬಂಟ್ವಾಳದಲ್ಲಿ ನಡೆದ ಬಿಜೆಪಿ ನವಕರ್ನಾಟಕ ಪರಿವರ್ತನಾ ರಾಲಿಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದ ಅವರು ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸುಮಾರು 2.50 ಲಕ್ಷ ಕೋಟಿಯಷ್ಟು ರಾಜ್ಯದ ಪಾಲನ್ನು ನೀಡಿದ್ದು, ಇದರಲ್ಲಿ ಈಗಾಗಲೇ ಸುಮಾರು 1.50 ಲಕ್ಷ ಕೋಟಿಗೂ ಮಿಕ್ಕಿದ ಹಣವನ್ನು ರಾಜ್ಯಕ್ಕೆ ಬಿಡುಗಡೆಯನ್ನೂ ಮಾಡಿದೆ.
ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರ ಸರಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ರಾಜ್ಯಕ್ಕೆ ಸೇರಬೇಕಾದ ಎಲ್ಲಾ ಹಣವನ್ನು ಸರಿಯಾಗಿ ನೀಡಿದ್ದು, ಹೀಗೆ ಆರೋಪ ಮಾಡಲು ನರೇಂದ್ರ ಮೋದಿಗೆ ನಾಚಿಗೆಯಾಗಬೇಕೆಂದರು. ಸಿದ್ಧರಾಮಯ್ಯ ಬದಲು ನರೇಂದ್ರ ಮೋದಿ ಎಂದು ಬಾಯಿತಪ್ಪ ಸದಾನಂದ ಗೌಡರು ಹೇಳಿದ್ದು, ಇದರ ಪರಿವೆಯೇ ಇಲ್ಲದೆ ಡಿವಿ ತನ್ನ ಭಾಷಣವನ್ನು ಮುಂದುವರಿಸಿದ್ದಾರೆ. ಶುಕ್ರವಾರ ಸುಳ್ಯದಲ್ಲಿ ನಡೆದ ಪರಿವರ್ತನಾ ರಾಲಿಯಲ್ಲೂ ಇಂಥಹುದು ಎಡವಟ್ಟು ನಡೆದಿತ್ತು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಬಳ್ಳಾರಿ ಸಂಸದ ಶ್ರೀರಾಮುಲು ಕೂಡಾ ಇದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದರು. ಸಿದ್ಧರಾಮಯ್ಯ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ನಡೆಸುತ್ತಿದೆ ಎನ್ನುವುದರ ಬದಲು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಹಿಂದೂ ಕಾರ್ಯಕರ್ತರ ಕೊಲೆ ನಡೆಸುತ್ತಿದ್ದಾರೆ ಎಂದಿದ್ದರು.
