FILM
ಮಲೆಯಾಳಂ ನಟ ದುಲ್ಖರ್ ಸಲ್ಮಾನ್ ಗೆ ಕೊರೊನಾ ಪಾಸಿಟಿವ್

ಕೊಚ್ಚಿನ್: ಮಲಯಾಳಂ ಖ್ಯಾತ ಚಿತ್ರ ನಟ ದುಲ್ಖರ್ ಸಲ್ಮಾನ್ ಗೆ ಕೋವಿಡ್ 19 ಸೋಂಕು ತಗುಲಿದ್ದು, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು. ರೋಗ ಲಕ್ಷಣಗಳೊಂದಿಗೆ ಐಸೋಲೇಟ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ದುಲ್ಖರ್ ಸಲ್ಮಾನ್ ತಂದೆ ಮಲೆಯಾಳಂ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರಿಗೂ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿತ್ತು.

ನನಗೆ ಕೋವಿಡ್ 19 ಸೋಂಕು ದೃಢವಾಗಿದೆ. ನಾನು ಮನೆಯಲ್ಲಿ ಪ್ರತ್ಯೇಕವಾಗಿದ್ದು. ಜ್ವರ ಸಹಿತ ರೋಗಲಕ್ಷಣಗಳನ್ನು ಹೊಂದಿದ್ದು, ಆದರೆ ಆರೋಗ್ಯವಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರು, ದಯವಿಟ್ಟು ಐಸೋಲೇಶನ್ ಗೆ ಒಳಗಾಗಿ ಮತ್ತು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ನಟ ಬರೆದುಕೊಂಡಿದ್ದಾರೆ..