LATEST NEWS
ಕಂಕಣ ಸೂರ್ಯ ಗ್ರಹಣ ಹಿನ್ನಲೆ ಡಿಸೆಂಬರ್ 26 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇಲ್ಲ
ಕಂಕಣ ಸೂರ್ಯ ಗ್ರಹಣ ಹಿನ್ನಲೆ ಡಿಸೆಂಬರ್ 26 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇಲ್ಲ
ಮಂಗಳೂರು ಡಿಸೆಂಬರ್ 24: ಗುರುವಾರ ಡಿಸೆಂಬರ್ 26 ರಂದು ಸಂಭವಿಸುವ ಕಂಕಣ ಸೂರ್ಯಗ್ರಹಣದ ಹಿನ್ನಲೆ ದಕ್ಷಿಣಕನ್ನಡದ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆಗಳಾಗಿವೆ.
ಹೆಸರಾಂತ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಅವಧಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಡಿಸೆಂಬರ್ 26 ರಂದು ಗುರುವಾರ ಮಧ್ಯಾಹ್ನ 12 ಗಂಟೆ ಬಳಿಕವೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಬೆಳಿಗ್ಗಿನ ದೇವರ ದರ್ಶನ, ತುಲಾಭಾರ, ಅಭಿಷೇಕ ಮೊದಲಾದ ಸೇವೆಗಳನ್ನು ನಡೆಸಲಾಗುವುದಿಲ್ಲ, ಭಕ್ತರು ಸಹಕರಿಸುವಂತೆ ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ.
ಅಲ್ಲದೆ ಜಿಲ್ಲೆಯ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೂಜಾ ವಿಧಿ ವಿಧಾನಗಳಲ್ಲಿ ಬದಲಾವಣೆಯಾಗಿದ್ದು, ಡಿಸೆಂಬರ್ 25 ರಂದು ರಾತ್ರಿ 6.30 ಕ್ಕೆ ಮಹಾಪೂಜೆ,ರಾತ್ರಿ ಭೋಜನ ಪ್ರಸಾದವೂ ಇರುವುದಿಲ್ಲ, ಅಲ್ಲದೆ ಡಿಸೆಂಬರ್ 26 ಸಂಜೆ 5 ಗಂಟೆ ಬಳಿಕವೇ ಭಕ್ತಾಧಿಗಳಿಗೆ ದೇವರ ದರ್ಶನದ ಅವಕಾಶ ಕಲ್ಪಿಸಲಾಗುವುದು , ಕಂಕಣ ಸೂರ್ಯಗ್ರಹಣದ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ನೆರವೇರುವುದಿಲ್ಲ, ಹಾಗೂ ಮಧ್ಯಾಹ್ನದ ಭೋಜನ ಪ್ರಸಾದವು ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.