LATEST NEWS
ಮಾರ್ಚ್ 31 ರವರೆಗೆ ಅಟಲ್ ಜೀ, ಸ್ಪಂದನ, ಆಧಾರ್ ಸೇವೆಗಳಿಗೆ ನಿರ್ಬಂಧ
ಮಾರ್ಚ್ 31 ರವರೆಗೆ ಅಟಲ್ ಜೀ, ಸ್ಪಂದನ, ಆಧಾರ್ ಸೇವೆಗಳಿಗೆ ನಿರ್ಬಂಧ
ಮಂಗಳೂರು ಮಾರ್ಚ್ 19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಜನ ಹೆಚ್ಚಾಗುತ್ತಿರುವ ಹಿನ್ನಲೆ ಕೆಲ ಸೇವೆಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್ ಆದೇಶಿಸಿದ್ದಾರೆ.
ಅಟಲ್ ಜೀ, ಸ್ಪಂದನ, ಆಧಾರ್ ಸೇವೆಗಳಿಗೆ ಮಾರ್ಚ್ 31 ರವರೆಗೆ ನಿರ್ಬಂಧ ವಿಧಿಸಿ ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ ಆರ್.ಟಿ.ಓ ಗಳಲ್ಲಿ ಹೊಸ ಡಿ.ಎಲ್ ನೀಡುವುದಕ್ಕೆ ತಡೆ ನೀಡಲಾಗಿದೆ. ಕೃಷಿ ತೋಟಗಾರಿಕೆ,ಮೀನುಗಾರಿಕೆ, ಸಮಾಜಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ಕಲ್ಯಾಣ, ಯುವ ಸಬಲಿಕರಣ,ಕನ್ನಡ ಸಂಸ್ಕೃತಿ ಇಲಾಖೆಗಳ ಸೇವೆಗಳಿಗೆ ತಡೆ
ಆದರೆ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯ ಆಗಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಜನರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಚೇರಿಗಳು ಎಂದಿನಂತೆ ತೆರೆದಿರುತ್ತೆ, ಅಧಿಕಾರಿಗಳು ಕಚೇರಿಯಲ್ಲಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.