LATEST NEWS
ಕುಡಿದ ಅಮಲಿನಲ್ಲಿ ರಂಗೋಲಿಯನ್ನು ಹಾಳು ಮಾಡಿದ ಯುವಕರು…!!

ಮಂಗಳೂರು ಅಕ್ಟೋಬರ್ 26: ದೀಪಾವಳಿ ಹಬ್ಬಕ್ಕೆ ಮಹಿಳೆಯೊಬ್ಬರು ಬಿಡಿಸಿದ ರಂಗೋಲಿಯನ್ನು ಯುವಕರು ಕುಡಿದ ಅಮಲಿನಲ್ಲಿ ವಿರೂಪಗೊಳಿಸಿದ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ದೀಪಾವಳಿ ಹಿನ್ನಲೆ ಹಬ್ಬಕ್ಕೆ ಶುಭಾಷಯ ಕೋರಿ ಮಹಿಳೆಯರು ಅಪಾರ್ಟ್ ಮೆಂಟ್ ನಲ್ಲಿ ರಂಗೋಲಿ ಬಿಡಿಸಿದ್ದರು. ಆದರೆ ರಾತ್ರಿ ಕೇರಳ ಮೂಲದವರೆನ್ನಲಾದ ಕೆಲವು ವಿದ್ಯಾರ್ಥಿಗಳು ಈ ರಂಗೋಲಿಯನ್ನು ಮೆಟ್ಟಿ ಅದನ್ನು ವಿರೂಪಗೊಳಿಸಿ ದುರ್ವರ್ತನೆ ತೋರಿದ್ದಾರೆ.
ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಒಬ್ಬ ವಿದ್ಯಾರ್ಥಿ ರಂಗೋಲಿ ಬಳಿ ನಿಂತಿದ್ದು, ಇನ್ನೊಬ್ಬ ರಂಗೋಲಿಯನ್ನು ಮೆಟ್ಟುತ್ತಿದ್ದಾನೆ. ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೊಲೀಸರು ಇಂತಹ ವರ್ತನೆ ತೋರಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.